ಶಂಕುಸ್ಥಾಪನೆ
ಹುಳಿಯಾರು: ಸಮೀಪದ ಗೂಬೆಹಳ್ಳಿ ಗ್ರಾಮದೇವತೆ ಕಣಿಮಮ್ಮ ದೇವಿ ದೇವಾಲಯದ ನೂತನ ವಿಮಾನ ಗೋಪುರ ನಿರ್ಮಾಣದ ಶಂಕುಸ್ಥಾಪನೆಯನ್ನು ಬುಧವಾರದಂದು ಬೆಲುಗೂರಿನ ಶ್ರೀಬಿಂಧುಮಾಧವ ಶರ್ಮ ಸ್ವಾಮಿಗಳು ನೆರವೇರಿಸಿದರು. ಅಮ್ಮನವರಿಗೆ ಧಾರ್ಮಿಕ ಪೂಜೆ ಸಲ್ಲಿಸಿ ನಂತರ ಗ್ರಾಮದ ಹಿರಿಯರ, ಯಜಮಾನರ ಹಾಗೂ ನೂರಾರು ಮಂದಿ ಸಮ್ಮುಖದಲ್ಲಿ ನೂತನ ಗೋಪುರದ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಿತು.
ರವಿಕಿರಣ ಉಚ್ಚಾಟನೆ
ತುಮಕೂರು: ಕುಣಿಗಲ್ ವಿಧಾನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಧಿಕೃತ ಅಭ್ಯರ್ಥಿ ರಾಮಸ್ವಾಮಿಗೌಡರ ಸೋಲಿಗೆ ಕಾರಣಕರ್ತರಾಗದ್ದಾರೆ ಎಂದು ದೂರಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಸಿ.ಎನ್. ರವಿಕಿರಣ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.