ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಿಡನೆಟ್ಟು ಪರಿಸರ ಅಸಮತೋಲನ ತಡೆಗಟ್ಟಿ

Rashmi Kasaragodu
Updated On : 7 Jun 2013, 12:37 pm

ಕ.ಪ್ರ. ವಾರ್ತೆ   ತುಮಕೂರು   ಜೂ. 6
ಪರಿಸರ ಅಸಮತೋಲನವನ್ನು ನೀಗಿಸುವ ನಿಟ್ಟಿನಲ್ಲಿ ಎಲ್ಲರೂ ಮನೆಗೆರಡು ಗಿಡಗಳನ್ನು ನೆಟ್ಟು ಬೆಳೆಸುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಸೂಕ್ತ ಎಂದು ಪ್ರಭಾರ ಜಿಲ್ಲಾಧಿಕಾರಿ ಎಚ್.ಆರ್. ಪೆದ್ದಪ್ಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತುಮಕೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕಚೇರಿ ಆವರಣದಲ್ಲಿ ಶ್ರೀಗಂಧದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಮರಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಾರಿ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಸ್ಕಾಂ ತುಮಕೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಟರಾಜ್ ಮತ್ತು ಸಿಬ್ಬಂದಿಗಳು ಕಚೇರಿ ಆವರಣ ಖಾಲಿ ಜಾಗದಲ್ಲಿ ಗಿಡ ನೆಡುವ ಮೂಲಕ ಒಳ್ಳೆಯ ಕಾರ್ಯಕೈಗೊಂಡಿದ್ದಾರೆ. ಇದೇ ಸರಕಾರಿ ಕಚೇರಿಗಳ ಖಾಲಿ ಜಾಗಗಳಲ್ಲಿ ಪರಿಸರಕ್ಕೆ ಪೂರಕವಾದ ಒಳ್ಳೆಯ ನೆರಳು ಹಾಗೂ ಹಕ್ಕಿ ಪಕ್ಷಿಗಳಿಗೆ ಹಣ್ಣು ನೀಡುವ ಮರಗಳನ್ನು ಬೆಳೆಸಲು ಮುಂದಾಗಬೇಕು. ಆ ಮೂಲಕ ಪರಿಸರದ ಅಸಮತೋಲನವನ್ನು ನಿಭಾಯಿಸಲು ಮುಂದಾಗಬೇಕೆಂದು ಪೆದ್ದಪ್ಪಯ್ಯ ನುಡಿದರು.
ಆಘಾತ: ರಾಜ್ಯದ ಒಟ್ಟಾರೆ ಆರಣ್ಯ ಪ್ರದೇಶದ ವಿಸ್ತೀರ್ಣವನ್ನು ಗಮನಿಸಿದರೆ ನಿಜಕ್ಕೂ ಆಘಾತವೆನಿಸುತ್ತದೆ.ಒಟ್ಟು ಭೂ ಪ್ರದೇಶದ ಶೇ. 33 ರಷ್ಟು ಅರಣ್ಯ ವಿರುಬೇಕು ಎಂಬ ನಿಯಮವಿದ್ದರೂ ಇದುವರೆಗೂ  ಆ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ವರ್ಷದಿಂದ ವರ್ಷಕ್ಕೆ ಆರಣ್ಯ ಪ್ರದೇಶವನ್ನು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ತಮ್ಮ ವ್ಯಾಪ್ತಿಯಲ್ಲಿ ಖಾಲಿ ಜಾಗಗಳಲ್ಲಿ ಗಿಡ ನೆಟ್ಟು ಬೆಳೆಸಲು ಮುಂದಾದಾಗ ಕನಿಷ್ಠ ಈಗಿರುವಷ್ಟು ಅರಣ್ಯ ಪ್ರದೇಶವಾದರೂ ಉಳಿಯುತ್ತದೆ. ಪ್ರಕೃತಿ ವಿಕೋಪಗಳು ದೂರವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ತಿಳಿಸಿದರು.
ಬೆಸ್ಕಾಂ ತುಮಕೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ. ನಟರಾಜ್ ಮಾತನಾಡಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಬೆಸ್ಕಾಂ ತನ್ನ ಅಳಿಲು ಸೇವೆಯನ್ನು ಆರಂಭಿಸಿದೆ.
ಇಂದು ಸಾಂಕೇತಿಕವಾಗಿ ಕಚೇರಿ ಆವರಣದಲ್ಲಿ ಗಿಡ ನೆಟ್ಟಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಉಪವಿಭಾಗದ ವ್ಯಾಪ್ತಿಗೆ ಬರುವ ಎಲ್ಲಾ ಉಪವಿಭಾಗಗಳ ಕಚೇರಿ ಆವರಣದಲ್ಲಿ ಲಭ್ಯವಿರುವ ಖಾಲಿ ಜಾಗಗಳಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಟ್ಟು ಬೆಳೆಸಲು ಪ್ರಾಮಾಣಿಕ ಪ್ರಯತ್ನ ನೀಡೆಲಿದ್ದೇವೆ.
ಪರಿಸರ ಅಸಮತೋಲನ ದೂರವಾಗಿ ಒಳ್ಳೆಯ ಮಳೆಯಾದರೆ ಅದರಿಂದ ವಿದ್ಯುತ್ ಸಮಸ್ಯೆ ದೂರವಾಗುವುದು. ಇಲಾಖೆಯ ಮೇಲಿನ ಒತ್ತಡವೂ ಕಡಿಮೆಯಾಗುವ ಹಿನ್ನೆಲೆಯಲ್ಲಿ ಪರಿಸರ ಉಳಿಸಿ ಬೆಳೆಸಲು ಬೆಸ್ಕಾಂ ಮುಂದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ ಎಸ್. ನಾಗಣ್ಣ, ಕೆ.ಪಿ.ಟಿ.ಸಿ.ಎಲ್. ಅಧೀಕ್ಷಕ ಎಂಜಿನಿಯರ್ ಗೋವಿಂದಪ್ಪ, ಹಿರಿಯ ಅಧಿಕಾರಿಗಳಾದ ಪ್ರಶಾಂತ ಕೂಡ್ಲಗಿ, ಕಿರಣ್, ವಿಶ್ವಮೂರ್ತಿ ಹಾಗೂ ಕೃಷ್ಣಪ್ಪ ಉಪಸ್ಥಿತರಿದ್ದರು, ಹಿರಿಯ ಡಿ ದರ್ಜೆ  ನೌಕರರಾದ ಜಯಮ್ಮ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement