ಕಲುಷಿತ ನೀರು ಸೇವನೆ: ವ್ಯಕ್ತಿ ಸಾವು, 35 ಮಂದಿ ಅಸ್ವಸ್ಥ
ಪಾವಗಡ: ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಶುರುವಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 35 ಮಂದಿ ಅಸ್ವಸ್ಥರಾದ ಘಟನೆ ತಾಲೂಕಿನ ಸಿದ್ಧಪುರ ಗ್ರಾಪಂ ವ್ಯಾಪ್ತಿಯ ಮಾರಮ್ಮನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.ತಿಪ್ಪೇಸ್ವಾಮಿ (65) ವಾಂತಿ ಭೇದಿಯಿಂದ ಮೃತಪಟ್ಟವರು. ಮಾರಮ್ಮನಹಳ್ಳಿಯಲ್ಲಿ ಗ್ರಾಪಂನಿಂದ ಕುಡಿಯುವ ನೀರು ಪೂರೈಕೆಗೆ ಅಳವಡಿಸಿದ್ದ ಪೈಪ್ಲೈನ್ ಒಡೆದು ಪೈಪ್ನಲ್ಲಿ ಹೊಲಸು ನೀರು ಸೇರಿ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ವಾಂತಿ ಭೇದಿಯಿಂದ ಅಸ್ವಸ್ಥರಾದ 10 ಪುರುಷರು, 25 ಮಹಿಳೆಯರು ವೈ.ಎನ್ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.