ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೌಟುಂಬಿಕ ಕಲಹ: ನದಿಗೆ ಹಾರಿ ಮಗನ ಜೊತೆ ತಾಯಿ ಆತ್ಮಹತ್ಯೆ

Rashmi Kasaragodu
Updated On : 8 Jun 2013, 12:07 pm

ಮದ್ದೂರು: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಣಿಯೊಬ್ಬಳು ತನ್ನ ಮಗನೊಂದಿಗೆ ಶಿಂಷಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕೊಪ್ಪ ಹೋಬಳಿ ಕೌಡ್ಲೆ ಗ್ರಾಮದಲ್ಲಿ ಜರುಗಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾ. ಅಮೃತ್ತೂರು ಹೋಬಳಿಯ ಜಿನ್ನಾಗರ ಗ್ರಾಮದ ಗಿರೀಶ್ ಪತ್ನಿ ರೂಪ (21)  ತನ್ನ ಒಂದು ವರ್ಷದ ಪುತ್ರ ಪವನ್ನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಕೌಡ್ಲೆ ಅಕ್ಷರ ದಾಸೋಹ ಶಾಲೆ ಸಮೀಪದ ಸೇತುವೆ ಬಳಿಯ ಶಿಂಷಾ ನದಿಯಲ್ಲಿ ರೂಪಾ ಹಾಗೂ ಪವನ್ ಶವಗಳು ಪತ್ತೆಯಾಗಿವೆ. 2 ತಿಂಗಳ ಗರ್ಭಿಣಿ ರೂಪಾ ಆತ್ಮಹತ್ಯೆಗೆ ಮುನ್ನ ತಮ್ಮ ಪುತ್ರ ಪವನ್ ದೇಹವನ್ನು ವೈರ್ನಿಂದ ಸೊಂಟಕ್ಕೆ ಬಿಗಿದುಕೊಂಡ ನಂತರ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನದಿಯಲ್ಲಿ ತಾಯಿ, ಮಗನ ಶವಗಳು ಕೊಳೆಯುವ ಹಂತಕ್ಕೆ ಬಂದಿದ್ದನ್ನು ಗಮನಿಸಿದ್ದಲ್ಲಿ 2 ದಿನಗಳ ಹಿಂದೆ ನದಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಾಗಮಂಗಲ ತಾಲೂಕು ಬಿಂಡೇನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಪುತ್ರಿ ರೂಪಾಳನ್ನು ಜಿನ್ನಾಗರ ಗ್ರಾಮದ ಗಿರೀಶನಿಗೆ 3 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ನಂತರ ದಿನಗಳಲ್ಲಿ ಗಿರೀಶ ಹಾಗೂ ಆತನ ಕುಟುಂಬದವರು ರೂಪಾಳಿಗೆ ದೈಹಿಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದ್ದು, ಬೇಸತ್ತ ರೂಪಾ ಕಳೆದ 3 ದಿನಗಳ ಹಿಂದೆ ಗಂಡನ ಮನೆ ತೊರೆದು ಮಗನೊಂದಿಗೆ ಶಿಂಷಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement