ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪರಿಸರ ನಾಶದಿಂದ ಮಾನವ ಕುಲ ವಿನಾಶದ ಅಂಚಿಗೆ

Rashmi Kasaragodu
Updated On : 7 Jun 2013, 11:57 am

ಗುಬ್ಬಿ:  ಪರಿಸರ ನಾಶ  ಮಾನವ ಕುಲವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಜೀವ ವೈವಿಧ್ಯತೆಯ ಸಂರಕ್ಷಣೆಯ ಸಂಕಲ್ಪ ತೊಟ್ಟು ಕೇವಲ ಆಡಂಬರದ ಆಚರಣೆಯನ್ನಷ್ಟೇ ನಾವು ಮಾಡುತ್ತಿದ್ದೇವೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ.ಎನ್. ಲಾವಣ್ಯಲತಾ ತಿಳಿಸಿದರು.
ಅವರು ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ  ತಾಲೂಕು ಕಾನೂನು  ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ, ಕಾನೂನು ಅರಿವು ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧುನಿಕತೆ ಬೆಳೆದಂತೆ ಮನುಷ್ಯನ ದುರಾಸೆಗೆ ಪರಿಸರ ನಾಶವಾಗಿರುವ ಕಾರಣ ಕಾಲಕಾಲಕ್ಕೆ ಮಳೆಬರೆದೆ ಇರುವುದರಿಂದ ಅಂತರ್ಜಲ ಬತ್ತಿ ಹೋಗಿದೆ. ಈ ಎಲ್ಲಾ ಅಂಶಗಳಿಂದ ಕುಡಿಯುವ ಶುದ್ಧ ನೀರಿಗೆ ಪರದಾಡುವ ಸ್ಧಿತಿ ಉಂಟಾಗಿದ್ದು ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಹಿನ್ನೆಯಲ್ಲಿ  ಕುಡಿಯುವ ನೀರಿನ ಮಾರಾಟ ಸನ್ನಿವೇಶವನ್ನು ಕಾಣುತ್ತಿದ್ದೇವೆ ಎಂದರು.
 ಸಿವಿಲ್ ನ್ಯಾಯಾಧೀಶರಾದ ಎಚ್.ಕೆ. ಉಮೇಶ್ ಮಾತನಾಡಿ ಆಮ್ಲಜನಕವನ್ನು ಹಣ ತೆತ್ತುಕೊಂಡು ಸೇವಿಸುವ ಹಂತ ತಲುಪಿರುವ ನಾಗರಿಕತೆಯಲ್ಲಿ ಆಧುನಿಕತೆಯೇ ಮಾರಕವಾಗುತ್ತಿದೆ. ಸ್ವಾರ್ಥಕ್ಕಾಗಿ ಪರಿಸರ ಹಾಳುಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಆಹಾರ ಉತ್ಪಾದತೆ ಸಹ ಕ್ಷೀಣಿಸಿದೆ ಎಂದರು. ವಲಯ ಆರಣ್ಯಾಧಿಕಾರಿ ಹರೀಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಪಿ. ಬಸವರಾಜು ಮಾತನಾಡಿ ಆಕರ್ಷಣೆಯ ಸಸಿಗಳನ್ನು ಅರಣ್ಯ ಪ್ರದೇಶ, ಸರ್ಕಾರಿ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಬೆಳೆಸಲಾಗುತಿದೆ.
ಈಗಾಗಲೆ ತಾಲೂಕಿನ ಹಲವೆಡೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದ್ದು ಸಾರ್ವಜನಿಕರು ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವಂತಹ ಮಹಾತ್ಕಾರ್ಯವಾಗಬೇಕಾಗಿದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕರಾದ ಸುನಿತಾ, ಗುಬ್ಬಿ  ಶ್ರೀ ಚಿದಂಬರಾಶ್ರಮದ ಅಧ್ಯಕ್ಷ ಶಿವಚಿದಂಬರ ಶರ್ಮಾ, ವಕೀಲರ ಸಂಘದ ಕಾರ್ಯದರ್ಶಿ ಡಿ.ಮಂಜುನಾಥ್, ತಾಲೂಕಿನ ದೈಹಿಕ ಶಿಕ್ಷಣ ಸಂಯೋಜಕ ರಾಜಣ್ಣ, ಮುಖ್ಯ ಶಿಕ್ಷಕರ ಶಂಕರಲಿಂಗಯ್ಯ, ಆಶ್ರಮದ ವ್ಯವಸ್ಧಾಪಕ ಕಮಲಾಕರ್, ಶಿಕ್ಷಕರಾದ ಅನಂತಭಟ್ಟ, ಜಗದೀಶ್, ವಿರೂಪಾಕ್ಷ, ಕೆ.ಜಿ. ನಾರಾಯಣ್  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement