ಪ್ರತಿಭಾನ್ವಿತರಿಗೆ ಶೇ.25ರಷ್ಟು ಮೀಸಲು
ಕ.ಪ್ರ.ವಾರ್ತೆ ಪಾವಗಡ್ಣ ಜೂ. 8
ಪಟ್ಟಣದ ಕಮ್ಮ ಚಾರಿಟೆಬಲ್ ಟ್ರಸ್ಟ್ನಲ್ಲಿ ಎಸ್ಸಿ, ಎಸ್ಟಿ ಸೇರಿದಂತೆ ಇತರೆ ಎಲ್ಲ ವರ್ಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲು ಪ್ರವೇಶವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ.ಜಿ. ವೆಂಕಟರಾಮಯ್ಯ ತಿಳಿಸಿದ್ದಾರೆ.
ಪಟ್ಟಣದ ಕಮ್ಮ ಚಾರಿಟೆಬಲ್ ಟ್ರಸ್ಟ್ನ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ತಾಲೂಕಿನ ದೊಡ್ಡಹಳ್ಳಿ ರಾಮಾಂಜನೇಯರವರ ಸ್ಫೂರ್ತಿ ಹಾಗೂ ಅವರ ಮಾರ್ಗದರ್ಶನದಂತೆ ತಾಲೂಕಿನ ಕಮ್ಮ ಜನಾಂಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉಚಿತ ವ್ಯಾಸಂಗಕ್ಕಾಗಿ ಜನಾಂಗದ ಹಿರಿಯ ಮುಖಂಡರ ಸಹಕಾರದಿಂದ ಪಟ್ಟಣದಲ್ಲಿ ಕಮ್ಮ ಚಾರಿಟೆಬಲ್ ಟ್ರಸ್ಟ್ ತೆರೆಯಲಾಗಿದ್ದು ಊಟ, ವಸತಿ ಸೇರಿದಂತೆ ಟ್ರಸ್ಟ್ ವತಿಯಿಂದ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಲಾಗುತ್ತಿದೆ ಎಂದರು.
3 ವರ್ಷಗಳಿಂದ ಪಟ್ಟಣದಲ್ಲಿ ಚಾರಿಟೆಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು ಸುಸಜ್ಜಿತ ಹಾಸ್ಟೆಲ್ ಸೌಲಭ್ಯದೊಂದಿಗೆ ಕಮ್ಮ ಜನಾಂಗದ ಸುಮಾರು 47 ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್ನಲ್ಲಿ ಅವಕಾಶ ಕಲ್ಪಿಸಿ ಉಚಿತ ವಿದ್ಯಾಭ್ಯಾಸ ಕಲ್ಪಿಸಲಾಗಿದೆ. 8ನೇ ತರಗತಿಯಿಂದ ಪದವಿಯವರೆಗೆ ವ್ಯಾಸಂಗ ಮಾಡಲು ಅವಕಾಶವಿದ್ದು ಪ್ರತಿ ವರ್ಷ ಅತ್ಯುನ್ಯತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಟ್ರಸ್ಟ್ನಲ್ಲಿ ಅವಕಾಶವಿರುವುದಾಗಿ ತಿಳಿಸಿದರು. ಕಳೆದ ವರ್ಷ ಟ್ರಸ್ಟ್ನ ಸಮಾರಂಭವೊಂದರಲ್ಲಿ ಎಲ್ಲಾ ವರ್ಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್ನಲ್ಲಿ ಅವಕಾಶ ಕಲ್ಪಿಸುವಂತೆ ಮಾಧ್ಯಮ ಮಿತ್ರರು ನೀಡಿದ ಸಲಹೆ ಸ್ವೀಕರಿಸಿ ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ ಅವರೊಂದಿಗೆ ಸಮಾಲೋಚನೆ ನಡೆಲಾಯಿತು. ಅವರ ಸಲಹೆಯಂತೆ ಕಮ್ಮ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ತಾಳೇಮರದಹಳ್ಳಿ ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ವಿವರಗಳಿಗೆ ನಾಗೇಂದ್ರಪ್ಪ, ಟ್ರಸ್ಟ್ನ ಮೇಲ್ವಿಚಾರಕರು, ಕಮ್ಮ ಚಾರಿಟೆಬಲ್ ಟ್ರಸ್ಟ್ ಪಾವಗಡ, ಮೊ.9448950770ಗೆ ಸಂಪರ್ಕಿಸಲು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ತಾಳೇಮರದಹಳ್ಳಿ ನರಸಿಂಹಯ್ಯ, ನಿರ್ದೇಶಕರಾದ ಮುಖಂಡ ಎಸ್.ವಿ.ಗೋವಿಂದಪ್ಪ, ಲಕ್ಷ್ಮೀನಾರಾಯಣಪ್ಪ, ಭೀಮನಕುಂಟೆ ಸತ್ಯನಾರಾಯಣಚೌಧರಿ, ಆರ್ಎಂಸಿ ನಿರ್ದೇಶಕ ಅಂಜಯ್ಯ ಸೇರಿದಂತೆ ಟ್ರಸ್ಟ್ನ ಆನೇಕ ಮಂದಿ ನಿರ್ದೇಶಕರಿದ್ದರು.