ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯಾದವರಿಗೆ ನ್ಯಾಯ ಒದಗಿಸಿ: ತೀರ್ಥಕುಮಾರ್

Rashmi Kasaragodu
Updated On : 8 Jun 2013, 11:55 am

ಕ.ಪ್ರ.ವಾರ್ತೆ   ತುಮಕೂರು   ಜೂ. 8
ರಾಜ್ಯದಲ್ಲಿ ಸುಮಾರು 4 ಲಕ್ಷ ಯಾದವ ಜನಾಂಗದವರು ಇದ್ದು ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಸರಿಯಾದ ಸೌಲಭ್ಯಗಳು ಸಿಕ್ಕದೆ ಅವರ ಬದುಕು ಕುಂಠಿತಗೊಂಡಿದೆ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ತೀರ್ಥಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿಯೂ ಯಾದವ ಜನಾಂಗ ಹಿಂದುಳಿದಿದ್ದು ಹಿಂದೆ ಇಬ್ಬರು ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಹಿಂದಿನ ಎರಡು ಚುನವಣೆಗಳಲ್ಲಿ ಒಬ್ಬರೇ ಒಬ್ಬರು ಶಾಸಕರಾಗಿ ಆಯ್ಕೆಯಾಗಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಯಾದವ ಜನಾಂಗವನ್ನು ಮತ ಬ್ಯಾಂಕ್ಗಳನ್ನಾಗಿಸಿಕೊಂಡು ಯಾವುದೇ ಉನ್ನತ ಮಟ್ಟದ ಪ್ರಾತಿನಿಧ್ಯತೆ ನೀಡುತ್ತಿಲ್ಲ. ಆದ್ದರಿಂದ ಯಾದವ ಜನಾಂಗ ಮೂಲೆಗುಂಪಾಗಿದೆ ಎಂದರು.
ವಿಧಾನ ಪರಿಷತ್ನಲ್ಲಿದ್ದವರು ಕಲೆ, ಸಾಹಿತ್ಯ, ಸಮಾಜ ಸೇವಕರಾಗಿ ಹೊರಹೊಮ್ಮಿರುವಂತಹ ಯಾದವ ಜನಾಂಗದ ಪ್ರತಿಭಾನ್ವಿತರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾದವ ಜನಾಂಗದದಲ್ಲಿ ಸಾಮಾಜಿಕ ಕಳಕಳಿಯುಳ್ಳ ಮತ್ತು ರಾಜಕೀಯ ಇಚ್ಛೆಯನ್ನು ಹೊಂದಿರುವವರಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಿಕೆಟ್ ಕೊಡುವ ಮೂಲಕ ಯಾದವ ಜನಾಂಗವನ್ನು ರಾಜಕೀಯವಾಗಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಯಾದವ ಜನಾಂಗ ಶೈಕ್ಷಣಿಕವಾಗಿಯೂ ಹಿಂದುಳಿದಿದ್ದು ಉನ್ನತ ಶಿಕ್ಷಣ ಮಾಡಲು ಉತ್ಸಾಹ ಹೊಂದಿರುವ ಯಾದವ ಜನಾಂಗದ ಯುವಕರು ಬಡತನದ ಬೇಗೆ ಎದುರಿಸಲಾರದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಪಡೆಯಲು ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೂಢನಂಬಿಕೆ, ಕಂದಾಚಾರದಲ್ಲಿ ಮುಳುಗಿ ಶೈಕ್ಷಣಿಕ ಅರಿವಿಲ್ಲದೆ ಯಾದವರು ಹಿಂದುಳ್ದಾದರೆ. ಆದ್ದರಿಂದ ರಾಜ್ಯ ಸರ್ಕಾರ ಯಾದವ ಜನಾಂಗದವರಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ್, ತಾಲೂಕು ಗೌರವ ಅಧ್ಯಕ್ಷ ರಾಜು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement