ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಸಗೊಬ್ಬರ ಅಭಾವಕ್ಕೆ ಅವಕಾಶವಿಲ್ಲ: ಕೃಷ್ಣಪ್ಪ

Rashmi Kasaragodu
Updated On : 8 Jun 2013, 11:55 am

ಕ.ಪ್ರ.ವಾರ್ತೆ   ಚಿಕ್ಕನಾಯಕನಹಳ್ಳಿ   ಜೂ. 8
ತಾಲೂಕಿನ ರೈತರಿಗೆ ರಸಗೊಬ್ಬರದ ಅಭಾವ ಕಾಡದಂತೆ ಗೊಬ್ಬರ ಮಾರಾಟಗಾರರು ಮುಂಜಾಗ್ರತೆ ವಹಿಸಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ನುಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ಪೂರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ಕರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿ, ಪೂರ್ವ ಮುಂಗಾರು ಸಮಯಕ್ಕೆ ಸರಿಯಾಗಿ ಬಾರದ ಪರಿಣಾಮ ಹೆಸರು, ಉದ್ದು, ಅಲಸಂಧೆ, ಹರಳು, ಎಳ್ಳು ಬೆಳೆಗಳು ವಿಫಲವಾಗಿವೆ. ಪ್ರಸಕ್ತ ಮುಂಗಾರಿನಲ್ಲಿ ತಾಲೂಕಿನ ಬಿತ್ತನೆ ಗುರಿ 20 ಸಾವಿರ ಹೆಕ್ಟೇರ್ ಆಗಬೇಕಿತ್ತು. ಕಳೆದ ಸಾಲಿನಲ್ಲಿಯು ಸಹ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಅಂದರೆ ಕೇವಲ 8 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಅದು ಈ ಬಾರಿ ಕೇವಲ 2400 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದರಿಂದ ರಸಗೊಬ್ಬರ ಕೊರತೆ ಕಂಡುಬಂದಿಲ್ಲ. ದಾಸ್ತಾನು ಮಾಡಿದ್ದ 200 ಕ್ವಿಂಟಲ್ ಬಿತ್ತನೆ ಬೀಜದಲ್ಲಿ ಬರೀ 50 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ ಎಂದರು. ಜೂನ್ ತಿಂಗಳಲ್ಲಿ ಮುಂಗಾರು ಚುರುಕುಗೊಂಡಿದ್ದು ರೈತರ ಅನುಕೂಲಕ್ಕಾಗಿ 50 ಕ್ವಿಂಟಲ್ ತೊಗರಿ, 110 ಕ್ವಿಂಟಲ್ ಎಂಆರ್- 6 ರಾಗಿಯನ್ನು ದಾಸ್ತಾನು ಮಾಡಲಾಗಿದೆ. ತಾಲೂಕಿನಾದ್ಯಂತ ಬಿತ್ತನೆಗೆ 7600 ಟನ್  ರಸಗೊಬ್ಬರ ಬಿತ್ತನೆಗೆ ಅಗತ್ಯವಿದೆ. ಕಳೆದ ಬಾರಿ ಈ ಹಂಗಾಮಿನಲ್ಲಿ 3 ಸಾವಿರ ಟನ್ ರಸಗೊಬ್ಬರ ಬಳಕೆಯಾಗಿತ್ತು. ಈ ಸಾಲಿನಲ್ಲಿ ಜೂನ್ನಲ್ಲಿ ಮುಂಗಾರು ಮಳೆ ಆಶಾದಾಯಕವಾಗಿದ್ದು, ರೈತರಿಗೆ ಅನೂಲಲವಾಗೆಂದು ಮುಂಜಾಗ್ರತಾ ಕ್ರಮವಾಗಿ ತಾಲೂಕಿನಲ್ಲಿ ಎಲ್ಲಾ ಸಹಕಾರ ಸಂಘಗಳು ಮತ್ತು ಖಸಗಿ ರಸಗೊಬ್ಬರ ಮಾರಾಟಗಾರರ ಮೂಲಕ ಕಾಂಪ್ಲೆಕ್ಸ್ ಹಾಗೂ ಡಿಎಪಿ ಗೊಬ್ಬರಗಳನ್ನು ಪ್ರತಿ ಮಾರಾಟ ಮಳಿಗೆಯಲ್ಲೂ ದಾಸ್ತಾನು ಮಾಡಲು ಸೂಚಿಸಲಾಗಿದೆ. ಹಂದನಕೆರೆ, ಹುಳಿಯಾರು, ಕಸಬಾ ಹೋಬಳಿಗಳಲ್ಲಿ 100 ಟನ್ ಗೊಬ್ಬರನ್ನು ದಾಸ್ತಾನು ಮಾಡಬೇಕು ಎಂದು  ಅವರು ಮಾರಾಟಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರಾಟಗಾರರು, ಯಾವುದೇ ಕಂಪನಿಯವರು ನಮಗೆ ಗೊಬ್ಬರವನ್ನು ಮಾರಾಟ ಸ್ಥಳಕ್ಕೆ ಸರಬರಾಜು ಮಾಡುವುದಿಲ್ಲ. ಸಕಾಲಕ್ಕೆ ಸರಿಯಾಗಿ ನಮಗೆ ಗೊಬ್ಬರ ದಾಸ್ತಾನು ಸಿಗುವುದಿಲ್ಲ.ನಾವೇ ಹೋಗಿ ಗೊಬ್ಬರ ದಾಸ್ತಾನು ಮಳಿಗೆಯಿಂದ ಗೊಬ್ಬರವನ್ನು ತರಬೇಕಾಗುವುದರಿಂದ ನಮಗೆ ಹೆಚ್ಚುವರಿ ಖರ್ಚು ತಗಲುತ್ತದೆ. ಹಾಗಾಗಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ಬೆಲೆಗೆ ಮಾರಾಟ ಮಾಡದಿದ್ದರೆ ನಮಗೆ ತಗಲುವ ಹೆಚ್ಚಿವರಿ ವೆಚ್ಚವನ್ನು ನಾವು ಯಾವುದರಿಂದ ಭರಿಸಬೇಕು ಎಂದು ಪ್ರಶ್ನಿಸಿದರು.
ತಿಪಟೂರು ಸಹಕಾರ ಸಂಗಗಳ ನಿಬಂಧಕರಾದ ಆರ್.ಜೆ.ಕಾಂತರಾಜು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಮಹಾಲಕ್ಷ್ಮೀ, ಜಿಲ್ಲಾ ಸಹಕಾರ ಬ್ಯಾಂಕಿನ ದಯಾನಂದ್, ತಹಸೀಲ್ದಾರ್ ಪುಟ್ಟರಾಮ್ಯಯ ಮುಂತಾದರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement