12 ರಂದು ಎಐವೈಎಫ್ ಪಾದಯಾತ್ರೆ
ತುಮಕೂರು: ನಿವೇಶನಕ್ಕಾಗಿ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ವತಿಯಿಂದ ಜೂ. 12 ರಂದು ಬೆಳಗ್ಗೆ 10-30 ಕ್ಕೆ ತುಮಕೂರಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರಸಭೆಗೆ ಈಗಾಗಲೇ ಕಳೆದ 30-11-2012 ರಂದು ನಗರಸಭೆ ಅಧ್ಯಕ್ಷರು, ಆಯುಕ್ತರಿಗೆ ಅರ್ಜಿ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಚುನಾವಣೆ ನೀತಿ ಸಂಹಿತೆ ಇದ್ದುದರಿಂದ 2 ನೇ ಹಂತದ ಅರ್ಜಿ ಕೊಡುವ ಕಾರ್ಯಕ್ರಮವನ್ನು ಜೂ. 12 ರಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಉಮೇಶ್, ಜಿಲ್ಲಾ ಎಐವೈಎಫ್ ಪ್ರ ಕಾರ್ಯದರ್ಶಿ ವಾಸುದೇವಕುಮಾರ್ ತಿಳಿಸಿದ್ದಾರೆ