'ಅತ್ಯಾಚಾರ ತಡೆಗಟ್ಟುವುದು ರಾಜಕಾರಣಿಗಳ ಜವಾಬ್ದಾರಿ'
ಕ.ಪ್ರ.ವಾರ್ತೆ ಗುಬ್ಬಿ ಜೂ. 9
ನಮ್ಮ ನಾಡು ಸಾಧುಸಂತರು ನಡೆದಾಡಿದ ಪವಿತ್ರ ಪುಣ್ಯ ಭೂಮಿ. ಇಂತಹ ಭೂಮಿಯಲ್ಲಿ ಅತ್ಯಾಚಾರಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವುದು ಮಠ, ಮಂದಿರ ಮತ್ತು ರಾಜಕಾರಣಿಗಳ ಜವಾಬ್ದಾರಿಯಾಗಿದೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ಗುಬ್ಬಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ಗುಬ್ಬಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುಬ್ಬಿ, ಸಾಮೂಹಿಕ ಪೂಜಾ ಮತ್ತು ನವಜೀವನ ಸಮಿತಿ ಶತಮಾನೋತ್ಸವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.