ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಂಗಾಲಾಗಿದ್ದ ಜನತೆಗೆ ಕೊಳವೆಬಾವಿ ನೀರು ತಂದ ಹರ್ಷ

Rashmi Kasaragodu
Updated On : 10 Jun 2013, 12:22 pm

ತಿಪಟೂರು: ನಗರದ ಹಳೇಪಾಳ್ಯ, ಅಣ್ಣಾಪುರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿನ ಜನತೆ ಕಳೆದ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಕಂಗಾಲಾಗಿದ್ದನ್ನು ಮನಗಂಡ ನಗರಸಭೆ ಈ ಭಾಗದ ನೀರಿನ ಸಮಸ್ಯೆ ಬಗೆಹರಿಸಲು 2 ಹೊಸ ಕೊಳವೆ ಬಾವಿಗಳನ್ನು ಕೊರೆಸಿದ್ದು,ಅದರಲ್ಲಿ ಒಂದು ಕೊಳವೆ ಬಾವಿಯಲ್ಲಿ ನೀರು ಬಂದಿದ್ದು, ಇಲ್ಲಿನ ಜನತೆಗೆ ತುಸು ನೆಮ್ಮದಿ ಸಿಕ್ಕಿದಂತಾಗಿದೆ.
ಹಳೇಪಾಳ್ಯ, ಅಣ್ಣಾಪುರ, ಲಂಬಾಣಿತಾಂಡ್ಯ, ಎ.ಕೆ.ಕಾಲೋನ್, ಕಲ್ಕೆಳೆ ಸೇರಿದಂತೆ ಮತ್ತಿತರೆ ಬಡಾವಣೆಗಳಿಂದ ಒಂದೇ ಒಂದು ಕೊಳವೆ ಬಾವಿಯಿದ್ದು, ಇದರ ಮೂಲಕ ನಾಲ್ಕೈದು ಮಿನಿ ವಾಟರ್ ಟ್ಯಾಂಕ್ಗಳಿಗೆ ನೀರು ಸರಬರಾಜಾಗುತ್ತಿತ್ತು. ಆದರೆ ಈ ಕೊಳವೆ ಬಾವಿಯ ನೀರು ಸಾಕಾಗುತ್ತಿರಲಿಲ್ಲ. ಜೊತೆಗೆ ವಿದ್ಯುತ್ ಸಮಸ್ಯೆಯಿಂದ ಈ ಭಾಗದ ಜನರಿಗೆ ನೀರಿನ ಸಮಸ್ಯೆ ತಲೆದೊರಿತ್ತು. ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ನಗರಸಭೆಯ ಗಮನಕ್ಕೆ ತಂದಿದ್ದರು.
ಅಲ್ಲದೆ ಕನ್ನಡಪ್ರಭ ನೀರಿನ ಸಮಸ್ಯೆ ಕುರಿತು ಸುದ್ದಿ ಪ್ರಕಟಿಸಿತ್ತು. ಇದನ್ನೆಲ್ಲಾ ಮನಗಂಡ ನಗರಸಭೆ ಅಣ್ಣಾಪುರ ಮತ್ತು ಹಳೇಪಾಳ್ಯ ಬಡಾವಣೆಗಳಲ್ಲಿ 2 ಕೊಳವೆ ಬಾವಿಗಳನ್ನು ಕೊರೆಸಿದ್ದು,ಈ ಪೈಕಿ ಅಣ್ಣಾಪುರದಲ್ಲಿ ಕೊರೆಸಿದ್ದ ಬಾವಿಯಲ್ಲಿ ನೀರು ಬಂದಿದ್ದು, ಇದರಿಂದ ಇಲ್ಲಿನ ಜನತೆಯ ಮುಖದಲ್ಲಿ ಹರ್ಷ ಕಂಡುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement