ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟ್ರ್ಯಾಕ್ಟರ್ ಚಾಲಕನ ಸೆರೆ: ರು. 2.5ಲಕ್ಷ ಕಳವು ಮಾಲು ವಶ

Rashmi Kasaragodu
Updated On : 10 Jun 2013, 12:23 pm

ಕ.ಪ್ರ.ವಾರ್ತೆ  ಕುಣಿಗಲ್  ಜೂ. 9
ಅಪರಾಧ ವಿಭಾಗದ ಪೊಲೀಸರು ಗಸ್ತು ತಿರುಗುವ ವೇಳೆ, ಅನುಮಾನಾಸ್ಪದವಾಗಿ ಟ್ರ್ಯಾಕ್ಟರ್ ಚಾಲಕನೊಬ್ಬ ವರ್ತಿಸಿದ ಹಿನ್ನೆಲೆಯಲ್ಲಿ, ವಿಚಾರಣೆಗೊಳಪಡಿಸಿ ಎರಡೂವರೆ ಲಕ್ಷ ರು. ಕಳವು ಮಾಲನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಕುಣಿಗಲ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸೈ ಶೇಷಾದ್ರಿ, ಸಿಬ್ಬಂದಿಗಳಾದ ಯಶೋಧರ, ಅರುಣಕುಮಾರ್, ಕಳೆದ ಶನಿವಾರದಂದು ಗಸ್ತಿನಲ್ಲಿದ್ದಾಗ, ಮದ್ದೂರು ರಸ್ತೆಯ ಗವಿಮಠ ಅಂಡರ್ಪಾಸ್ ಬಳಿ ಟ್ರ್ಯಾಕ್ಟರ್ ಎಂಜಿನ್ ಚಾಲನೆ ಮಾಡಿಕೊಂಡ ಬರುತ್ತಿದ್ದ ಚಾಲಕ ನರಸಿಂಹಮೂರ್ತಿಯನ್ನು ವಿಚಾರಣೆಗೆ ನಿಲ್ಲಿಸಿದಾಗ, ಆತ ಅನುಮಾನಾಸ್ಪದವಾಗಿ ವರ್ತಿಸಿ, ಪರಾರಿಯಾಗಲು ಯತ್ನಿಸಿದ. ಆತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಸಾಲದ ಶೂಲಕ್ಕೆ ಸಿಕ್ಕು ತನ್ನ ಸ್ನೇಹಿತರೊಂದಿಗೆ ಸೇರಿ ಟ್ರ್ಯಾಕ್ಟರ್  ಕಳವು ಮಾಡಿಕೊಂಡು ಬರುತ್ತಿದ್ದು ಪತ್ತೆಯಾಯಿತು. ಡಿವೈಎಸ್ಪಿ ಉಮಾರಾಣಿ, ಸಿಪಿಐ ಧಮೇಂದ್ರ ಮಾರ್ಗದರ್ಶನದಲ್ಲಿ ಹೆಚ್ಚಿನ ವಿಚಾರಣೆ ನಡೆಸಿ, ಕಳವು ಮಾಡಲೆತ್ನಿಸಿದ ಹುಳ್ಳೇಗೌಡನಪಾಳ್ಯ, ದಾಸನಪುರ ಹೋಬಳಿಯವರಾದ  ನಾರಾಯಣ, ನರಸಿಂಹಮೂರ್ತಿ ಹಾಗೂ ಶ್ರೀನಿವಾಸರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement