ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿಕ್ಷಕರು ಸ್ಫೂರ್ತಿ ತುಂಬುವ ಕೇಂದ್ರಗಳಿಗೆ ಸಮ

Rashmi Kasaragodu
Updated On : 10 Jun 2013, 12:24 pm

ಕ.ಪ್ರ.ವಾರ್ತೆ  ಶಿರಾ  ಜೂ. 9
ಶಿಕ್ಷಕರು ಜನತೆಯಲ್ಲಿ ಸ್ಫೂರ್ತಿ ತುಂಬುವ ಕೇಂದ್ರಗಳು ಎಂದು  ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಚಿಕ್ಕನಹಳ್ಳಿ ಪ.ಪೂ. ಕಾಲೇಜುಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಮಾತನಾಡುತ್ತಿದ್ದರು.
ಜನರ ನಿರೀಕ್ಷೆಯಂತೆ ನೀರಾವರಿ ಖಾತೆ ಸಿಕ್ಕದೆ ಹೋದರೂ ಅದಕ್ಕಿಂತಲೂ ಹೆಚ್ಚಿನದಾದ ಕಾನೂನು ಖಾತೆ ಸಿಕ್ಕಿರುವುದು ಸವಾಲನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ನನ್ನಲ್ಲಿದೆ ಎಂದರು. ಯಾವುದೇ ಇಲಾಖೆಯಾಗಿರಲಿ ಅಧಿಕಾರಿಗಳು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿಕೊಡುವಂತೆ ತಾಕಿತು ಮಾಡಿದ ಅವರು ರಾಜ್ಯಾದ್ಯಂತ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕಾಂಗ್ರೆಸ್ ಸಂಕಲ್ಪಿಸಿದೆ ಎಂದು ನುಡಿದರು.  ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ, ಎತ್ತಿನಹೋಳೆ, ಹೇಮಾವತಿ ನೀರನ್ನು ತಂದು ಶಾಶ್ವತ ನೀರಾವರಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಯೋಜನೆಯನ್ನು ರಾಜ್ಯಪಾಲರ ಭಾಷಣದಲ್ಲೂ ಪ್ರಸ್ತಾಪಿಸಲಾಗಿದೆ ಮುಂದಿನ ಒಂದೆರಡು ದಿನಗಳಲ್ಲಿ ಈ ಬಗ್ಗೆ ದೆಹಲಿಗೆ ಹೋಗುವುದಾಗಿ ತಿಳಿಸಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ರಾಜ್ಕುಮಾರ್ ಮಾತನಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಕಳೆದ ಸಲಕ್ಕಿಂತ ಈ ಭಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 13 ಕ್ಕೂ ಹೆಚ್ಚುವರಿ ಫಲಿತಾಂಶ ಬಂದಿದ್ದು ಶಿಕ್ಷಕರಿಗೆ ಇದರ ಶ್ರೇಯಸ್ಸು ಸಲ್ಲಬೇಕು ಎಂದು ತಿಳಿಸಿ ಕಳೆದ ವರ್ಷದಂತೆ ಪ್ರಯತ್ನದ ಜೊತೆಗೆ ಪ್ರಾಮಾಣಿಕತೆ ಸೇವಾ ಭಾವನೆ ಬೆಳೆಸಿಕೊಳ್ಳಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವುದು ಸಾಧ್ಯವಿದೆ ಎಂದರು.
ಶಿಕ್ಷಕರ ಜವಾಬ್ದಾರಿ: ವಿಶೇಷ ಉಪನ್ಯಾಸ ನೀಡಿದ ಪ್ರಾಚಾರ್ಯ ನಾಗಪ್ಪ ಅವರು ಮಾತನಾಡಿ ಮಕ್ಕಳ ನಡುವೆ ಅಂತರ ಬೆಳೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು. ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು. ಮಾಜಿ ವಿಧಾನಸಭೆ ಉಪ ಸಭಾಪತಿ ಎನ್.ವೈ.ಗೋಪಾಲಕೃಷ್ಣ, ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಲಲಿತಮ್ಮ, ತಾ.ಪಂ. ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಉದಯಶಂಕರ್, ಡಿಡಿಪಿಐ ಅಂಜಿನಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ನಾಗಭೂಷಣ, ಪೌರಾಯುಕ್ತ ಬಿ.ಟಿ.ರಂಗಸ್ವಾಮಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement