ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನ್ನ ನೀಡುವ ಅನ್ನದಾತನನ್ನು ಸ್ವಾವಲಂಬಿ ಮಾಡಿ

Rashmi Kasaragodu
Updated On : 11 Jun 2013, 12:15 pm

ಕ.ಪ್ರ.ವಾರ್ತೆ   ಕುಣಿಗಲ್   ಜೂ. 10
ದೇಶಕ್ಕೆ ಅನ್ನ ನೀಡುವ ಅನ್ನದಾತ, ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುವಂತಹ ಗಂಭೀರ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಹಲವು ಧ್ಯೆಯೋದ್ದೇಶಗಳಿಂದ ಅಸ್ತಿತ್ವಕ್ಕೆ ಬರುವ ಬ್ಯಾಂಕುಗಳು, ಅನ್ನದಾನತನ ಸಮಸ್ಯೆಗೆ ಪರಿಣಾಮಕಾರಿಯಾಗಿ ಸ್ಪಂದಿಸಿ ಅವರನ್ನು ಆರ್ಥಿಕವಾಗಿ, ಮಾನಸಿಕವಾಗಿ ಸ್ವಾವಲಂಬಿಗಳನ್ನಾಗಿಸುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ಕಿತ್ತನಾಗಮಂಗಲದ ಅರೇಶಂಕರ ಮಠಾಧೀಶರಾದ ಸಿದ್ದರಾಮಚೈತನ್ಯ ಸ್ವಾಮೀಜಿ ತಿಳಿಸಿದರು.
ಸೋಮವಾರ, ಪಟ್ಟಣದ ಕುವೆಂಪು ನಗರದಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿದ ಫೆಡರಲ್ ಬ್ಯಾಂಕ್ನ 86ನೇ ಶಾಖೆ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ, ದೇಶದಲ್ಲಿ ಹಲವು ಧ್ಯೆಯೋದ್ದೇಶಗಳನ್ನಿಟ್ಟುಕೊಂಡು ಸಾಕಷ್ಟು ಬ್ಯಾಂಕುಗಳು ಕಾರ್ಯಾರಂಭ ಮಾಡುತ್ತಿವೆ. ಎಲ್ಲಾ ವರ್ಗದ ಜನತೆಯ ಆರ್ಥಿಕ ಸದೃಢತೆ ಹಾಗೂ ಸ್ವಾವಲಂಬನೆ ನಿಟ್ಟಿನಲ್ಲಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಆದರೂ ದೇಶಕ್ಕೆ ಅನ್ನ ನೀಡುವ ರೈತನ ಸಮಗ್ರ ಅಭಿವೃದ್ಧಿ  ಹಾಗೂ ಅರ್ಥಿಕ ಸ್ವಾವಲಂಬನೆ ವೃದ್ಧಿಸುವ ದಿಸೆಯಲ್ಲಿ ಬ್ಯಾಂಕುಗಳು ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕಾದ ಅನಿವಾರ್ಯತೆ ಹೆಚ್ಚಿದೆ. ರೈತನ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಪರಿಣಾಮಕಾರಿ ಆರ್ಥಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ, ಅವುಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಸಕಾಲದಲ್ಲಿ ರೈತರಿಗೆ ಸೂಕ್ತ ನೆರವನ್ನು ನೀಡುವ ಮೂಲಕ ರೈತರ ನೆರವಿಗೆ ಬ್ಯಾಂಕುಗಳು ಧಾವಿಸಿ ಅನ್ನದಾತನ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಬ್ಯಾಂಕುಗಳು  ಸ್ಪಂದಿಸಲಿ: ಕುಣಿಗಲ್ ಶಾಖೆಯನ್ನು ಉದ್ಘಾಟಿಸಿದ ಡಿವೈಎಸ್ಪಿ ಉಮಾರಾಣಿ, ಸಮಾಜದಲ್ಲಿ  ಆರ್ಥಿಕವಾಗಿ ಹಿಂದುಳಿದ ಬಡಜನತೆಯ ಸಮಗ್ರ ಅಭಿವೃದ್ಧಿ  ನಿಟ್ಟಿನಲ್ಲಿ ಪೂರಕವಾಗಿ ಬ್ಯಾಂಕುಗಳು  ಸ್ಪಂದಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ ಆರ್ಥಿಕ ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ. ಇತ್ತೀಚೆಗೆ ಹಲವಾರು ಬ್ಯಾಂಕುಗಳು ಪ್ರಾರಂಭಗೊಳ್ಳುವ ಮೂಲಕ ಎಲ್ಲಾ ವರ್ಗದ ಜನತೆಯ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಸ್ಪಂದಿಸುತ್ತಿರುವುದು ಸ್ವಗತಾರ್ಹವಾಗಿದೆ ಎಂದರು.
ಯಶಸ್ವಿ ಕಾರ್ಯ: ಫೆಡರಲ್ ಬ್ಯಾಂಕಿನ ಎಜಿಎಂ ವಿ.ಟಿ.ಜಾಯ್, 1945ರಲ್ಲಿ ಪ್ರಾರಂಭವಾದ ಫೆಡರಲ್ ಬ್ಯಾಂಕ್ ಕೇರಳ ರಾಜ್ಯದಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಕರ್ನಾಟಕದಲ್ಲೂ ಕಾರ್ಯಾಚರಣೆ ವಿಸ್ತರಿಸಿದೆ, ಒಟ್ಟಾರೆ 1105 ಶಾಖೆಗಳನ್ನು ಹೊಂದಿದ್ದು,1201ಎಟಿಎಂ ಹೊಂದಿದೆ, ಎಲ್ಲಾ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದ್ದು ಕರ್ನಾಟಕದಲ್ಲಿ 85 ಶಾಖೆಗಳನ್ನು ಹೊಂದಿದ್ದು, ಪಟ್ಟಣದಲ್ಲಿನ ಶಾಖೆ 86ನೇ ಶಾಖೆಯಾಗಿದೆ. ಒಂದು ಲಕ್ಷ ಕೋಟಿ ರು. ಹೂಡಿಕೆಯೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಪಟ್ಟಣದಲ್ಲಿ ಇ ಸ್ಟಾಂಪಿಂಗ್ ಸೇರಿದಂತೆ ಫೋನ್ ಬಿಲ್ ಇತರೆ ಬಿಲ್ಗಳ ಪಾವತಿ ಸೇವೆಗಳನ್ನೂ ಸಹ ಕಾರ್ಯಾರಂಭ ಮಾಡಲಿವೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಟಿ. ವೆಂಕಟೇಗೌಡ, ಕುಣಿಗಲ್ ಶಾಖೆಯ ವ್ಯವಸ್ಥಾಪಕ ಯುವರಾಜ,ಪುರಸಭೆ ಸದಸ್ಯರಾದ ಈ.ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement