ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡ ಪರ ಕೆಲಸ ಕರವೇ ಮುಂಚೂಣಿಯಲ್ಲಿ

Rashmi Kasaragodu
Updated On : 11 Jun 2013, 12:01 pm

ಕ.ಪ್ರ.ವಾರ್ತೆ   ಕುಣಿಗಲ್   ಜೂ. 10
ಕನ್ನಡ ನೆಲ, ಜಲ, ಭಾಷೆ ಸಂರಕ್ಷಣೆ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಕೊಡುಗೆ ಅಘಾದವಾಗಿದ್ದು, ಈ ಪೈಕಿ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿರುವುದು ಸ್ವಾಗತಾರ್ಹ ಸಂಗತಿ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತಿಳಿಸಿದರು.
ಸೋಮವಾರ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 47ನೇ ಹುಟ್ಟುಹಬ್ಬದ ಅಂಗವಾಗಿ, ಕುಣಿಗಲ್ ಕರವೇ ಘಟಕ ಪಟ್ಟಣದ ದೊಡ್ಡಪೇಟೆ, ಸಿದ್ಧಾರ್ಥ ಕಾಲೋನಿ ಹಾಗೂ ಬಿಜಿಎಸ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟುಪುಸ್ತಕ ಹಾಗೂ ಲೇಖನಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೇಲ್ವೆಯಲ್ಲಿ ಕನ್ನಡಿಗರಿಗೆ ಸಮಾನ ನೌಕರಿ ಅವಕಾಶ, ಬೆಳಗಾವಿಯಲ್ಲಿ ಕನ್ನಡಿಗರ ಸಮಸ್ಯೆ ನಿವಾರಣೆ ಸೇರಿದಂತೆ ರಾಜ್ಯದ ನೆಲ, ಜಲ, ಭಾಷೆ ಸಂರಕ್ಷಣೆ ನಿಟ್ಟಿನಲ್ಲಿ ಕರವೇ ಹೋರಾಟ ನಿಜಕ್ಕೂ ಅಭಿನಂದನೀಯ. ಯಾವುದೇ ರಾಜಕೀಯ ಸೋಂಕಿಲ್ಲದೆ ನಾಡು, ನುಡಿ ಸೇವೆಗೆ ಕರವೇ ಪದಾಧಿಕಾರಿಗಳು ಶ್ರಮಿಸುತ್ತಿರುವುದು ಇತರರಿಗೂ ಮಾರ್ಗದರ್ಶನ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೂ ಕರವೇ ಕಾರ್ಯಕರ್ತರ ಹೋರಾಟ ನಿಜಕ್ಕೂ ಅಭಿನಂದನೀಯ ಎಂದರು. ಕರವೇ ಗೌರವಾಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದು,  ಬಿಆರ್ಸಿ ಗುಲ್ಜಾರ್ ಆಹಮದ್, ಪುರಸಭಾ ಸದಸ್ಯ ಅರುಣ್ಕುಮಾರ್, ಮುಖ್ಯೋಪಾಧ್ಯಾಯ ಗಂಗರಾಜು, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಕಿರಣ್ಕುಮಾರ್, ದಿನೇಶ್, ಪ್ರಶಾಂತ್, ಚೇತನ್, ಮಂಜ ಇತರರು ಉಪಸ್ಥಿತರಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಸಿಹಿ, ನೋಟ್ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement