ಕಾನೂನು ಅರಿವು ನೆರವು ಕಾರ್ಯಕ್ರಮ
ಶಿರಾ: ತಾಲೂಕಿನ ತಾವರೆಕೆರೆ ಗ್ರಾಮದ ಗುರುರಾಘವೇಂದ್ರ ಜಿನ್ನಿಂಗ್ ಟ್ರೇಡರ್ಸ್ ಸಂಸ್ಥೆ ಆವರಣದಲ್ಲಿ ಜೂನ್ 12 ಬುಧವಾರ ಬೆಳಿಗ್ಗೆ 9-30 ಕ್ಕೆ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜನಸಾಮಾನ್ಯರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ರವಿ ಅವರು ಉದ್ಘಾಟಿಸುವರು. ಸಾರ್ವಜನಿಕರು ಸದರಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.