ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದಲಿತ ಮುಖಂಡರ ಕುಂದುಕೊರತೆ ಸಭೆ: ಕೆಲವರ ಬಹಿಷ್ಕಾರ

Rashmi Kasaragodu
Updated On : 11 Jun 2013, 12:14 pm

ಕ.ಪ್ರ.ವಾರ್ತೆ   ಕುಣಿಗಲ್   ಜೂ. 10
ಪೊಲೀಸ್ ಉಪವಿಭಾಗ ಮಟ್ಟದ ದಲಿತ ಮುಖಂಡರ ಕುಂದುಕೊರತೆ ಸಭೆಗೆ, ಡಿವೈಎಸ್ಪಿ ಸಕಾಲದಲ್ಲಿ ಆಗಮಿಸದ  ಬಗ್ಗೆ ಬೇಸರ ವ್ಯಕ್ತಪಡಿಸಿ ದಲಿತ ಮುಖಂಡರ ಒಂದು ಗುಂಪು ಸಭೆ ಬಹಿಷ್ಕರಿಸಿದರೆ, ಮತ್ತೊಂದು ಗುಂಪು ಸಭೆಯಲ್ಲಿ ಪಾಲ್ಗೊಂಡ ಪ್ರಸಂಗ ನಡೆದಿದೆ.
ಕುಣಿಗಲ್ ಪೊಲೀಸ್ ಉಪವಿಭಾಗದ ದಲಿತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 10ಗಂಟೆಗೆ ಆಯೋಜನೆ ಮಾಡಲಾಗಿದ್ದು, ಹನ್ನೊಂದುವರೆ ಗಂಟೆಯಾದರೂ ಡಿವೈಎಸ್ಪಿ ಸಭೆಗೆ ಆಗಮಸಿದೆ ದಲಿತ ಮುಖಂಡರಿಗೆ ಅಗೌರವ ತೋರಿದ್ದಾರೆಂದು ದೂರಿದ ಮುಖಂಡರಾದ ಎಸ್.ಟಿ.ರಾಜು, ವರದರಾಜು, ಈರಣ್ಣ, ಪ್ರಶಾಂತ್, ದಲಿತ ನಾರಾಯಣ ಇತರೆ ಮುಖಂಡರು ಡಿವೈಎಸ್ಪಿ, ದಲಿತ ಮುಖಂಡರನ್ನು ಸಭೆಗೆ ಕರೆದು ಬೇರೆ ಕಾರ್ಯಕ್ರಮಕ್ಕೆ ತೆರಳಿ, ದಲಿತ ಮುಖಂಡರಿಗೆ ಅವಮಾನ ಮಾಡಿರುವ ಧೋರಣೆ ಖಂಡಿಸಿ ಸಭೆಯನ್ನು ಬಹಿಷ್ಕರಿಸಿ ಹೊರಬಂದರು. ಬ್ಯಾಂಕ್ ಶಾಖೆ ಉದ್ಘಾಟನೆಗೆ ತೆರಳಿದ್ದ ಡಿವೈಎಸ್ಪಿ ಉಮಾರಾಣಿ ಕಚೇರಿಗೆ ಆಗಮಿಸಿ, ಸಭೆ ಪ್ರಾರಂಭಿಸಲು ಮುಂದಾದಾಗ, ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವಂತೆ ಸಿಪಿಐ ಧರ್ಮೇಂದ್ರ, ಪಿಎಸೈಗಳಾದ ರಂಜನ್ಕುಮಾರ್, ಮಂಜುನಾಥ ಹೂಗಾರ್ ಆಹ್ವಾನಿಸಿದರೂ ಅವರಾರು ಬರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement