ಪರಿಸರ ಸ್ನೇಹಿ ಯೋಜನೆ ಜಾರಿಯಾಗಲಿ: ಕುಮಾರ್
ಆನೇಕಲ್ಲು: ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜೊತೆಗೆ ಜನ ಸಾಮಾನ್ಯರ ಅಗತ್ಯೆಗಳನ್ನು ಸುಲಭದಲ್ಲಿ ಪೂರೈಸುವ ಶಕ್ತಿ ಸಂಚಯನ, ಮರುಬಳಕೆ ಹಾಗೂ ಇಂಧನ ಕ್ಷಮತೆ ಇರುವಂತಹ ಯೋಜನೆಗಳ ಆವಿಷ್ಕಾರ ಮಾಡಬೇಕೆಂದು ಗೋಪಾಲನ್ ಇನ್ನೊವೇಷನ್ ಮಾಲ್ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಮನವಿ ಮಾಡಿದ್ದಾರೆ.
ಅವರು ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ನಲ್ಲಿ ಆನೇಕಲ್ಲಿನ ಶಿರಡಿ ಸಾಯಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿದ್ದ ಪರಿಸರ ಸ್ನೇಹಿ ಪ್ರಾಜೆಕ್ಟ್ಗಳ ಪ್ರದರ್ಶನ, ನೈಸರ್ಗಿಕ ವಸ್ತುಗಳ ಸದ್ಬಳಕೆ, ವಿನಾಶವನ್ನು ತಡೆಯಲು ಮಾತು ರಹಿತ ನಾಟಕ ವೀಕ್ಷಿಸಿ ಮಾತನಾಡಿ ಕೇಂದ್ರ ಸರ್ಕಾರ 2006ರಲ್ಲಿ ಖಾತೆಯನ್ನು ತೆರೆದು ರಿನ್ಯೂಯಬಲ್ ಸೋರ್ಸ್ ಅಫ್ ಎನರ್ಜಿ ಖಾತೆ ಮೂಲಕ ದೇಶ ವ್ಯಾಪಿ ಜಾಗೃತಿ ಮೂಡಿಸಿದೆ. ವಾಹನಗಳ ಇಂಧನ ಸುಡುವಿಕೆ ತಡೆಯುವುದು, ಸೌರ ಶಕ್ತಿ ಬಳಕೆ, ಜಲ ವಾಯು ಮೂಲಕ ಶಕ್ತಿ ಸಂವರ್ಧನೆಯ ವಿಭಾಗದಲ್ಲಿ ಸುಧಾರಿತ ಆವಿಷ್ಕಾರಗಳು ಬೇಕಿದೆ ಎಂದರು.