ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾ.ಕಚೇರಿ ನಿರ್ಲಕ್ಷ್ಯ: ಜಾತಿ ಪ್ರಮಾಣ ಪತ್ರಕ್ಕಾಗಿ ಪರದಾಟ

Rashmi Kasaragodu
Updated On : 12 Jun 2013, 11:47 am

ಕ.ಪ್ರ.ವಾರ್ತೆ    ತಿಪಟೂರು    ಜೂ. 12
ತಾಲೂಕಿನಲ್ಲಿ ಶಾಲಾ-ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆ ಈಗಾಗಲೆ ಆರಂಭವಾಗಿದ್ದು, ಸೇರ್ಪಡೆಯಾಗಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಅತ್ಯವಶ್ಯಕವಾಗಿವೆ. ಆದರೆ ಇವುಗಳನ್ನು ಪಡೆಯಲು ಕಂದಾಯಾಧಿಕಾರಿಗಳು, ಅಟಲ್ಜಿ ಸ್ನೇಹ ಕೇಂದ್ರ ಮತ್ತು ತಾಲೂಕು ಕಚೇರಿಯ ವಿಳಂಬದಿಂದಾಗಿ ಪೋಷಕರು, ವಿದ್ಯಾರ್ಥಿಗಳು ಹರಸಾಹಸಪಡುವಂತಾಗಿದೆ ಎಂದು ವಿವೇಕ ವಿಚಾರ ವೇದಿಕೆಯು ಕಿಡಿಕಾರಿದೆ.
ವಿದ್ಯಾರ್ಥಿಗಳಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ವಿಫಲವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಈ ಪ್ರಮಾಣ ಪತ್ರಕ್ಕೆ ಬೇಕಾದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಒದಗಿಸಿದರೂ ಸಹ ತಿಂಗಳುಗಟ್ಟಲೆ ಕಾಯಬೇಕಾದ ದುಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಆದಾಯ ಪ್ರಮಾಣ ಪತ್ರವನ್ನು ಶಾಲಾ-ಕಾಲೇಜುಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಕಡಿಮೆಯಾಗುವುದರ ಜೊತೆಗೆ ಬಡ ವಿದ್ಯಾರ್ಥಿಗಳು ಓದಲು ಅನುಕೂಲವಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಈ ಪ್ರಮಾಣ ಪತ್ರವನ್ನು ನೀಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಬಂದು ವಿಚಾರಿಸಿದರೆ ನಿಮ್ಮೂರಿನ ಗ್ರಾಮ ಲೆಕ್ಕಿಗರನ್ನು ಕೇಳಿ ಎಂದು ದಬಾಯಿಸುತ್ತಾರೆ. ಗ್ರಾಮ ಲೆಕ್ಕಿಗರನ್ನು ವಿಚಾರಿಸಿದರೆ ಸರಿಯಾಗಿ ಸ್ಪಂದಿಸದೆ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement