ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಾವಗೀತೆಗಳ ತರಬೇತಿ ಶಿಬಿರದ ಉದ್ಘಾಟನೆ

Rashmi Kasaragodu
Updated On : 12 Jun 2013, 11:46 am

ಕ.ಪ್ರ.ವಾರ್ತೆ    ತಿಪಟೂರು    ಜೂ. 12
ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರಸುರಭಿ ಟ್ರಸ್ಟೆ ಬೆಂಗಳೂರು ಹಾಗೂ ಶಂಕರ ಟ್ರೈನಿಂಗ್ ಸೆಂಟರ್ ತಿಪಟೂರು ಇವರ ಸಂಯುಕ್ತಾಶ್ರಯದಲ್ಲಿ ಬನ್ನಿ ನಮ್ಮ ಹಾಡಿಗೆ ಶೀರ್ಷಿಕೆ ಅಡಿಯಲ್ಲಿ ಮೂರು ದಿನಗಳ ಕಾಲ ಆನಂದ ಕಂದ ವಿರಚಿತ ಭಾವಗೀತೆಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸ್ವರಸುರಭಿ ಟ್ರಸ್ಟ್ ಅಧ್ಯಕ್ಷೆ ಸುವರ್ಣಮ್ಮ ಸಂಗೀತದ ಸಪ್ತಸ್ವರಗಳ ಮಹತ್ವದ ಬಗ್ಗೆ ತಿಳಿಸಿದರು. ಜಾವಗಲ್  ಪ್ರಸನ್ನ ನಮ್ಮ ಸಂಸ್ಕೃತಿಯಲ್ಲಿರುವ ವೈಶಿಷ್ಟ್ಯಪೂರ್ಣತೆಯನ್ನು ಪ್ರತಿ ಮನೆ ಮನೆಗೂ ತಲುಪಿಸುವತ್ತ ಯುವ ಪೀಳಿಗೆಯು ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.
ಸ್ವರಸರಭಿ ಟ್ರಸ್ಟ್ ಸದಸ್ಯ ಸತೀಶ್ ಕುಲಕರ್ಣಿ ಇಂದು ಯುವ ಜನತೆ ಪಾಶ್ಚಾತ್ಯ ಸಂಗೀತದ ಕಡೆಗೆ ಮಾರುಹೋಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸ್ವರಸುರಭಿ ಟ್ರಸ್ಟ್ ಅಧ್ಯಕ್ಷ ಧರ್ ಅಯ್ಯರ್, ಗಾಯಕ ಹಾಗೂ ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ್ ಮತ್ತಿತರರಿದ್ದರು.ಸುಧಾಪೈ ಪ್ರಾರ್ಥಿಸಿ, ಶಂಕರೆ ಟ್ರೈನಿಂಗ್ ಸೆಂಟರ್ನ ಶಿವಪ್ರಕಾಶ ಸ್ವಾಗತಿಸಿ, ಕಲಾ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement