ಶಿಶು ಸಾಹಿತ್ಯ ಕುರಿತು ಲೇಖನ ನೀಡಲು ಮನವಿ
ಶಿರಾ: 2013ರ ಜೂನ್ 28, 29, 30 ರಂದು ತುಮಕೂರು ಜಿಲ್ಲಾ 8ನೇ ಸಾಹಿತ್ಯ ಸಮ್ಮೇಳನ ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಲಿದ್ದು ಇದರ ಸವಿನೆನಪಿಗಾಗಿ ಜಿಲ್ಲಾ ಕಸಾಪ ಹಲವು ಕೃತಿಗಳನ್ನು ಪ್ರಕಟಿಸಲು ಉತ್ಸುಕವಾಗಿದೆ. ಶಿಶು ಸಾಹಿತ್ಯ ಕುರಿತಂತೆ ಜಿಲ್ಲೆಯ ಸಾಹಿತಿಗಳು, ಲೇಖಕರು, ಬರಹಗಾರರು ತಮ್ಮ ಲೇಖನಗಳನ್ನು ನೀಡಲು ಕೋರಲಾಗಿದೆ. ಮತ್ತು ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರತಿನಿಧಿಗಳಿಗೆ ಅನ್ಯ ಕಾರ್ಯ ನಿಮಿತ್ತ ರಜೆಯ ಸೌಲಭ್ಯ ಕಲ್ಪಿಸಲಾಗಿದ್ದು ಆಸಕ್ತ ಸರ್ಕಾರಿ ನೌಕರರು ಜೂ. 20 ರೊಳಗಾಗಿ 100 ರು. ಪ್ರತಿನಿಧಿ ಶುಲ್ಕ ಪಾವತಿಸಿ ಕೋಟೆ ಚಂದ್ರಶೇಖರ್, ಕಾರ್ಯದರ್ಶಿ, ಎಸ್.ರಾಜ್ಕುಮಾರ್, ಕಾರ್ಯದರ್ಶಿ, ಕಸಾಪ ಇವರಲ್ಲಿ ನೋಂದಾಯಿಸಿಕೊಳ್ಳುವುದೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಿರಾ ಘಟಕದ ಅಧ್ಯಕ್ಷ ವೈ. ನರೇಶ್ ಬಾಬು ತಮ್ಮ ತಿಳಿಸಿದ್ದಾರೆ.
ಕರ್ತವ್ಯದಲ್ಲಿ ಲೋಪ: ದೂರು ದಾಖಲು
ಕುಣಿಗಲ್: ಪುರಸಭೆ, ಪಟ್ಟಣದ ರಾಹೆ 48ರ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಬೀದಿ ದೀಪಗಳಿಗೆ, ಅಸುರಕ್ಷಿತ ರೀತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ, ಸಾರ್ವಜನಿಕರ ಮತ್ತು ಮುಗ್ಧ ಜಾನುವಾರುಗಳಿಗೆ ತೊಂದರೆಯಾಗುವಂತೆ ನಿರ್ವಹಣೆ ಮಾಡಿ, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಪುರಸಭೆ ಎಲೆಕ್ಟ್ರಿಕಲ್ ಕಿರಿಯ ಎಂಜನಿಯರ್ ವಿರುದ್ಧ, ಕರ್ತವ್ಯಲೋಪ, ಸಾರ್ವಜನಿಕರಿಗೆ ಉಪದ್ರವ( ಪಬ್ಲಿಕ್ ನ್ಯೂಸೆನ್ಸ್) ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನವಹಕ್ಕು ಕಾರ್ಯಕರ್ತ ಆನಂದ್ಸಿಂಗ್ ನೀಡಿದ ದೂರಿನ ಮೇರೆಗೆ, ಪಿಎಸೈ ಗುರುಪ್ರಸಾದ್, ಪುರಸಭೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜನರ ಭಾವನೆಗೆ ಸ್ಪಂದಿಸಿ: ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ: ನಿಮ್ಮ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಸಿಂಗದಹಳ್ಳಿ ರಾಜ್ಕುಮಾರ್ ನುಡಿದರು. ಅವರು ಪಟ್ಟಣದ ಸಂಘದ ಕ:ಕೇರಿಯಲ್ಲಿ ಏರ್ಪಡಿಸಿದ್ದ ನೂತನ ಪುರಸಭಾ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡುತ್ತಿದ್ದರು.ಚುನಾವಣೆಗಳಲ್ಲಿ ಆಯ್ಕೆಯಾಗುವುದು ಜನರ ಪ್ರೀತಿವಿಸ್ವಾಸ ಗಳಿಸಿದ್ದರೆ ಮಾತ್ರ ಸಾಧ್ಯ. ಅಂತಹ ಪ್ರೀತಿ ವಿಶ್ವಾಸ ಗಳಿಸಿ ಪುರಸಭೆಯಲ್ಲಿ ಆಯ್ಕೆಯಾಗಿರುವ ನೀವು ಜನಾನುರಾಗಿಗಳಾಗಿ ಕರ್ತವ್ಯ ನಿರ್ವಹಿಸಿ ಎಂದು ನುಡಿದರು.