ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೈಕ್ ಕಳವು: ಇಬ್ಬರ ಬಂಧನ

Rashmi Kasaragodu
Updated On : 14 Jun 2013, 12:12 pm

ಪಾವಗಡ: ಬೈಕ್ ಕಳವು ಕುರಿತಂತೆ ದಾಳಿ ನಡೆಸಿದ ಪಾವಗಡ ಪೊಲೀಸರು ಗುರುವಾರ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ ಅವರಲ್ಲಿದ್ದ 1ಲಕ್ಷ 73 ಸಾವಿರ ಮೌಲ್ಯದ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಟ್ಟಣದ ವಾಸಿಗಳಾದ ಮಲ್ಲಿಕಾರ್ಜುನ (25)ಹಾಗೂ ಮಂಜುನಾಥ್ (25)ಎಂಬುವರು ಬಂಧಿತ ಆರೋಪಿಗಳು. ಕಳೆದ 6 ತಿಂಗಳಿಂದ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದ್ದು ಕಳವಿನ ಬಗ್ಗೆ ದೂರ ಪಡೆದ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದರು. ಆರೋಪಿಗಳ ಸುಳಿವು ಪತ್ತೆಯಾಗದ ಕಾರಣ  ತೀವ್ರ ಕಾರ್ಯಾಚರಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ಕೆ. ಸೌಮ್ಯಲತಾ, ಪಾವಗಡ ವೃತ್ತ ನಿರೀಕ್ಷಕ ಭಾನುಪ್ರಸಾದ್ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್ಐ ನಟರಾಜ್ ಹಾಗೂ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಟ್ಟಣದ ರೈನ್ಗೆಜ್ ಬೈಕ್ ಸರ್ವಿಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ ಹಾಗೂ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ  ಶಾಂತಿ ನಗರದ ವಾಸಿ ಮಂಜುನಾಥ್ ಎಂಬುವರನ್ನು ಬಂಧಿಸಿದ್ದಾರೆ. ನಂತರ ಅವರಲ್ಲಿದ್ದ ಮೂರು ಸ್ಲೆಂಡರ್ ಪ್ಲಸ್ ಹಿರೋ ಹೊಂಡಾಗಳು ಸೇರಿದಂತೆ ಒಂದು ಹಿರೋ ಹೊಂಡಾ ಸ್ಲೆಂಡರ್ ವಾಹನ ವಶಪಡಿಸಿಕೊಂಡಿದ್ದಾರೆ. ಬೈಕ್ ಕಳವು  ಕಾರ್ಯಾಚರಣೆಯಲ್ಲಿ ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ಠಾಣಾ ಸಿಬ್ಬಂದಿಗಳಾದ ಮಂಜುನಾಥ್, ರಾಮಕೃಷ್ಣ, ಕುಮಾರಸ್ವಾಮಿ, ಕೇಶವರಾಜ್, ನರಸಿಂಹಮೂರ್ತಿ, ಶಶಿಕುಮಾರ್, ಸುದರ್ಶನ್ ಅವರನ್ನು ಜಿಲ್ಲಾ ಎಸ್ಪಿ, ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಪಾವಗಡ: ಪಟ್ಟಣದ ಕಮ್ಮ ಜನಾಂಗದ ವಿದ್ಯಾರ್ಥಿ ನಿಲಯಕ್ಕೆ ತಾ.ಎಲ್ಲಾ ವರ್ಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಈ ಕುರಿತು ಮಾತನಾಡಿದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ.ಜಿ.ವೆಂಕಟರಾಮಯ್ಯ,  ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕೆ ತಾ.ಕಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದಲ್ಲಿ ಕೋಟ್ಯಂತರ ರು.ಗಳ ವೆಚ್ಚದಲ್ಲಿ ಸುಸರ್ಜಿತ ಹಾಸ್ಟೆಲ್ ತೆರೆದಿದ್ದು, ಕಮ್ಮ ಸೇರಿದಂತೆ ಎಲ್ಲಾ ವರ್ಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉಚಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ. ಉತ್ತಮ ಆಂಕಗಳಿಸಿದ ಹಾಸ್ಟೆಲ್ನ ಎಲ್ಲಾ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು. ವಿವರಗಳಿಗೆ, ಡಾ.ಜಿ.ವೆಂಕಟರಾಮಯ್ಯ, ಪ್ರಧಾನ ಕಾರ್ಯದರ್ಶಿ, ಕಮ್ಮ ಚಾರಿಟಬಲ್ ಟ್ರಸ್ಟ್, ಶ್ರೀನಿವಾಸ ನಗರ ಪಾವಗಡ, ದೂ. 9448074422, 9448950770 ಇವರನ್ನು ಸಂಪರ್ಕಿಸಲು  ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement