ಜಿಲ್ಲಾಧಿಕಾರಿಗಾಗಿ ಡಿಸಿ ಆಫೀಸ್ ಮುಂದೆ ಧರಣಿ
ತುಮಕೂರು: ತುಮಕೂರಿಗೆ ಜಿಲ್ಲಾಧಿಕಾರಿಗಳನ್ನು ತಕ್ಷಣ ನೇಮಕ ಮಾಡಬೇಕೆಂದು ಒತ್ತಾಯಿಸಿ ನಗರಸಭೆ ಮಾಜಿ ಸದಸ್ಯ ಅಣೆ ತೋಟ ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿದರು.
ಜಿಲ್ಲೆಯ ರೈತ, ಜನರ ಸಮಸ್ಯೆ ನೀಗಿಸುವ ಜಿಲ್ಲಾಧಿಕಾರಿ ಎಲ್ಲಿದ್ದೀರಾ, ಜನ ನಾಯಕರೇ ಶಕ್ತಿ ಕೇಂದ್ರಕ್ಕೆ ಶಕ್ತಿ ತುಂಬುವಿರಾ ಎಂಬ ಭಿತ್ತಿ ಫಲಕ ಹಿಡಿದು ಶ್ರೀನಿವಾಸ್ ತಮ್ಮ ಸ್ನೇಹಿತರೊಂದಿಗೆ ಧರಣಿ ನಡೆಸಿದರು. ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳಿಲ್ಲದೆ ರೈತರು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಶ್ರೀನಿವಾಸ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಶ್ರೀನಿವಾಸ್ ಜತೆ ಅಣೆ ತೋಟದ ಹುಚ್ಚಣ್ಣ, ರಾಜೀವ್ ಪಾಲ್ಗೊಂಡಿದ್ದರು.