ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಳೆ ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ

Rashmi Kasaragodu
Updated On : 16 Jun 2013, 12:48 pm

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮದ ದಂಡಿನಶಿವರ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ತುರುವೇಕೆರೆ ತಾಲೂಕಿನ ದಂಡಿನಶಿವರದಲ್ಲಿ ಜೂ. 17ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕ ಕೆ.ಎನ್. ರಾಜಣ್ಣನವರು ಅಧ್ಯಕ್ಷತೆ ವಹಿಸುವರು.  ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಇಂದು ನಿಷೇಧಾಜ್ಞೆ
ತುಮಕೂರು ನಗರದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಜೂ. 16 ರಂದು ಡಿಪ್ಲೋಮೊ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1-30 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರು ಆದೇಶಿಸಿದ್ದಾರೆ. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸಿದ್ದಗಂಗಾ ಬಾಲಕರ ಪಿ.ಯು.ಕಾಲೇಜ್ ಮತ್ತು ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಪಿ.ಯು.ಕಾಲೇಜ್ ಮತ್ತು ಸಿದ್ದಗಂಗಾ ಬಾಲಕಿಯರ ಪಿ.ಯು. ಕಾಲೇಜು ಕೇಂದ್ರಗಳಲ್ಲಿ  ಪರೀಕ್ಷೆ ನಡೆಯಲಿದೆ.
ಜನಸಂಪರ್ಕ ಸಭೆ
ಲೋ ಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಎಚ್.ಬಿ. ರಮೇಶ್ಕುಮಾರ್  ಪಿ.ಐ. ಇವರು ಜೂ. 17 ರಂದು ತಿಪಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆ.11 ರಿಂದ ಮ.1 ಗಂಟೆಯವರೆಗೆ ಮತ್ತು ಗುಬ್ಬಿ ತಾಲೂಕಿನ ತಾ.ಪಂ. ಸಭಾಂಗಣದಲ್ಲಿ ಮ.3ರಿಂದ ಸಂಜೆ 5  ಗಂಟೆಯವರೆಗೆ, 22 ರಂದು ಶಿರಾ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ. 1 ಗಂಟೆಯವರೆಗೆ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಎಸ್.ಆರ್. ಶಿದ್ಲಿಂಗಣ್ಣವರ, ಡಿ.ವೈ.ಎಸ್.ಪಿ. ತುಮಕೂರು ಇವರು ಜೂ. 19 ರಂದು ಕೊರಟಗೆರೆ ತಾಲೂಕಿನ ತಾ.ಪಂ. ಸಮುದಾಯ ಭವನದಲ್ಲಿ ಬೆ.11 ರಿಂದ ಮ.1 ಗಂಟೆಯವರೆಗೆ ಮತ್ತು ಮಧುಗಿರಿ ತಾಲೂಕಿನ ತಾ.ಪಂ. ಸಮುದಾಯ ಭವನದಲ್ಲಿ ಮ.3ರಿಂದ ಸಂಜೆ 5 ಗಂಟೆಯವರೆಗೆ, ಜೂ. 20 ರಂದು ಪಾವಗಡ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ. 1ಗಂಟೆಯವರೆಗೆ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಎಂ.ಆರ್. ಗೌತಮ್, ಪಿ.ಐ. ಇವರು ಜೂ. 21 ರಂದು ತುರುವೇಕೆರೆ ತಾ.ಪಂ. ಸಮುದಾಯ ಭವನದಲ್ಲಿ  ಬೆ.11ರಿಂದ ಮ.1 ಗಂಟೆಯವರೆಗೆ ಮತ್ತು ಚಿ.ನಾ.ಹಳ್ಳಿ ತಾ.ಪಂ. ಸಭಾಂಗಣದಲ್ಲಿ ಮ.3ರಿಂದ ಸಂಜೆ 5 ಗಂಟೆಯವರೆಗೆ, 24 ರಂದು ಕುಣಿಗಲ್ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ.1ಗಂಟೆಯವರೆಗೆ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement