ಲೋಕ ಕಲ್ಯಾಣಕ್ಕಾಗಿ ವಿಶೇಷ ಹೋಮ, ಹವನ
ಕುಣಿಗಲ್: ಪಟ್ಟಣದ ಚೌಡೇಶ್ವರಿ ನಗರದಲ್ಲಿನ ಮಹಾಗಣಪತಿ, ಸುಬ್ರಹ್ಮಣ್ಯ, ನವಗ್ರಹ, ನಾಗದೇವತೆ ಸಮೇತ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ 33ನೇ ವಾರ್ಷಿಕೋತ್ಸವದ ಪ್ರಯುಕ್ತ ಹಾಗೂ ಲೋಕ ಕಲ್ಯಾಣಕ್ಕಾಗಿ ವಿಶೇಷ ಹೋಮ, ಹವನ ಧಾರ್ಮಿಕ ಕಾರ್ಯಕ್ರಮಗಳನ್ನು ಇದೇ 17ರಿಂದ 19ರವರೆಗೂ ಹಮ್ಮಿಕೊಳ್ಳಲಾಗಿದೆ ಎಂದು ತೋಗಟೆವೀರರ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ. ಜೂ. 17ರಂದು ಸ್ವಸ್ತಿವಾಚನ ಗಣಪತಿ, ಸುಬ್ರಹ್ಮಣ್ಯ ಹೋಮ, 18ರ ಮಂಗಳವಾರದಂದು ನವಗ್ರಹೋಮ ಶ್ರೀದೇವಿಹೋಮ, ಕಳಾಹೋಮ, ಸುದರ್ಶನಹೋಮ, ಮೃತ್ಯುಂಜಯ ಹೋಮ ಹಾಗೂ 19ರ ಬುಧವರಾದದಂದು ಶಯನೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.