ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಸ್ಯ ಸಂರಕ್ಷಣೆಗೆ ಕೃಷಿ ಇಲಾಖೆ ಸಲಹೆ

Rashmi Kasaragodu
Updated On : 16 Jun 2013, 12:45 pm

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿರುವ ಹೆಸರು ಬೆಳೆಗೆ ಹೇನಿನ ಬಾಧೆ ಕಂಡು ಬಂದಿದೆ. ಇದರ ಲಕ್ಷಣಗಳೇನೆಂದರೆ, ಎಲೆಗಳು ಹಾಗೂ ಗಿಡಗಳಲ್ಲಿ ಗುಂಪುಗುಂಪಾಗಿ ಹೇನುಗಳಿರುತ್ತವೆ. ಇದರ ಹತೋಟಿಗೆ 1.7 ಮಿಲಿ ಡೈಮಿಥೋಯೇಟ್(ರೋಗಾರ್)ನ್ನು 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 1 ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕಾಗುತ್ತದೆ.
ಇದಲ್ಲದೆ ನಂಜು ರೋಗವು ಸಹ ಆವರಿಸಲಿದ್ದು, ಎಲೆಗಳು ಕಾಂತಿಹೀನಗೊಂಡು ಹೂವು ಸರಿಯಾಗಿ ಬಿಡುವುದಿಲ್ಲ.ಇದರ ಹತ್ಗೂ ಸಹ ಅಂತರ್ ವ್ಯಾಪಿ ಸಸ್ಯಸಂರಕ್ಷಣಾ ಔಷಧಿ ಸಿಂಪಡಿಸಬೇಕು. 1.7 ಡೈಮಿಥೋಯೇಟ್ ಔಷಧಿಯನ್ನು 1 ಲೀ. ನೀರಿನ  ಪ್ರಮಾಣದಲ್ಲಿ ಬಳಸಿ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವಿನ ಬಾಧೆ ಕಂಡುಬಂದಲ್ಲಿ 2 ಮಿಲಿ ಕ್ಲೋರೋಫೈರಿಪಾಸ್ ಔಷಧಿಯನ್ನು 1ಲೀ. ನೀರಿನ ಪ್ರಮಾಣದಲ್ಲಿ ಸಿಂಪಡಿಸಲು ತಿಳಿಸಿದ್ದು, ಇದನ್ನು ಒಂದು ಎಕರೆಗೆ 250 ಲೀ. ಪ್ರಮಾಣದಲ್ಲಿ ಸಿಂಪರಣಾ ದ್ರಾವಣ ಬಳಸಬೇಕಾಗುತ್ತದೆ.  ಮೇಲಿನ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ರೈತ ಬಾಂಧವರಲ್ಲಿ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನಾಗಲಿ ಅಥವಾ ಕೃಷಿ ಇಲಾಖೆಯನ್ನಾಗಲಿ ಸಂಪರ್ಕಿಸ ಬೇಕೆಂದು ಸಹಾಯಕ ಕೃಷಿ ನಿರ್ದೇಶಕರಾದ ಕೃಷ್ಣಪ್ಪನವರು  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement