ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾಮಾನ್ಯ ವಿಚಾರ ಹೊಳೆಯಲೇ ಇಲ್ಲ

Rashmi Kasaragodu
Updated On : 16 Jun 2013, 12:46 pm

ತುಮಕೂರು: ಜಿಲ್ಲೆಯಲ್ಲಿ ಹಳೇ ಬೋರ್ವೆಲ್ಗಳು ವಿಫಲವಾದ ತಕ್ಷಣ ಹೊಸ ಬೋರ್ವೆಲ್ಗಳನ್ನು ಕೊರೆಸಲಾಗುತ್ತಿದೆ. ಬೇಸಗೆ ಬಂತೆಂದರೆ ಬೋರ್ವೆಲ್ ಕೊರೆಯುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಇದಕ್ಕೆ ತುಮಕೂರು ಜಿಲ್ಲೆ ಕೂಡ ಹೊರತಾಗಿಲ್ಲ. ಗುಬ್ಬಿ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಜಿಪಂ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಮ್ಮ ತಾಲೂಕಿನಲ್ಲಿ  ಕುಡಿಯುವ ನೀರಿನ ಹಿನ್ನೆಲೆಯಲ್ಲಿ 82 ಹೊಸ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಆದರೆ ಮೋಟಾರ್, ಪೈಪ್ ಅಳವಡಿಸಿಲ್ಲ ಎಂದು ದೂರಿದರು.
ಕೊರಟಗೆರೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಮಾತನಾಡಿ, ತಮ್ಮ ತಾಲೂಕಿನಲ್ಲಿ ಸುಮಾರು 60 ಹೊಸ ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಆದರೆ ಮೋಟಾರ್, ಪೈಪ್ಗಳನ್ನು ಅಳವಡಿಸಿಲ್ಲ ಎಂದು ದೂರಿದರು. ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ಸಹ ಹೊಸ ಬೋರ್ವೆಲ್ಗಳನ್ನು ಕೊರೆಯವಲಾಗಿದೆ. ಆದರೆ ಮೋಟಾರ್ ಅಳವಡಿಸಿಲ್ಲ ಎಂದು ದೂರಿದರು.
ಸಾಮಾನ್ಯ ವಿಚಾರ ಹೊಳೆಯಲೇ ಇಲ್ಲ: ಇದೇ ರೀತಿಯ ಸಮಸ್ಯೆ ಇತರೆ ತಾಲೂಕುಗಳ ಶಾಸಕರದ್ದು ಸಹ. ಆದರೆ ಜಿಲ್ಲೆಯ ಯಾವೊಬ್ಬ ಶಾಸಕರೂ ಕೂಡ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣನವರು ಎತ್ತಿದ ಸುಸ್ಥಿತಿಯಲ್ಲಿರುವ ಹಳೇ ಮೋಟಾರ್, ಪೈಪ್, ಸ್ಟಾರ್ಟರ್ಗಳ ಕುರಿತ 5 ಕೋಟಿ ರು. ಮೌಲ್ಯದ ಪ್ರಶ್ನೆಯ ಕುರಿತು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಹೊಸ ಬೋರ್ವೆಲ್ಗಳಿಗೆ ಸುಸ್ಥಿತಿಯಲ್ಲಿರುವ ಹಳೇ ಬೋರ್ವೆಲ್ಗಳ ಮೋಟಾರ್, ಪೈಪ್ಗಳನ್ನು ಅಳವಡಿಸಿ, ಕೂಡಲೇ ನೀರು ಪಡೆಯಬಹುದೆಂಬ ವಿಚಾರ ಹೊಳೆಯಲೇ ಇಲ್ಲ. ಕುಡಿಯುವ ನೀರು, ನೀರಾವರಿ ಕುರಿತಂತೆ ತಜ್ಞರಂತೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಕೂಡ ಮೌನ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement