ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾರ್ಯಕರ್ತರು ಎದೆಗುಂದಬಾರದು: ಬಿ ಸುರೇಶ್ ಗೌಡ

Rashmi Kasaragodu
Updated On : 16 Jun 2013, 10:53 am

ತುಮಕೂರು: ಸೋಲೇ ಗೆಲವಿನ ಸೋಪಾನ. ಕಾರ್ಯಕರ್ತರು ಎದೆಗುಂದಬಾರದು. ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ. ತತ್ವ ಸಿದ್ಧಾಂತ ಹಿಂದುತ್ವ ನಿಷ್ಠ ಪಕ್ಷ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ತಿಳಿಸಿದರು.
ಅವರು ಗುಬ್ಬಿಯಲ್ಲಿ ನಡೆದ ಬಿಜೆಪಿ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ನಾವೆಲ್ಲರೂ ಕೂಡಾ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.
ಎಲ್ಲ ವರ್ಗದವರನ್ನೂ ನಾವು ತಲುಪಬೇಕು. ಬಿಜೆಪಿ ಸರ್ಕಾರದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಗ್ರಾಮ ಮಟ್ಟದಲ್ಲಿ ನಾವು ಸಮರ್ಪಕವಾಗಿ ಅರಿವು ಮೂಡಿಸದೇ ಮಾಹಿತಿ ನೀಡದೇ ಇರುವುದು ಕೂಡಾ ನಮ್ಮ ಹಿನ್ನೆಡೆಗೆ ಕಾರಣ ಎಂದು  ಸುರೇಶ್ ಗೌಡರು ವಿಷಾದಿಸಿದರು ಇದುವರೆಗೂ ಕೂಡಾ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ತುಂಬಾ ಸದೃಢವಾಗಿದೆ.  ಇದನ್ನು ಇನ್ನಷ್ಟು  ಬಲಪಡಿಸಲು ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಕೂಡ ಕಹಿ ಘಟನೆಗಳನ್ನು ಮರೆತು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಸುರೇಶ್ ಗೌಡರು ಆಗ್ರಹಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಾಗರನಹಳ್ಳಿ ವಿಜಿಕುಮಾರ್, ಜಿಲ್ಲಾ  ಪ್ರಧಾನ ಕಾರ್ಯದರ್ಶಿ  ಪಂಚಾಕ್ಷರಿ, ಅಖಿಲಾನಂದ, ರಾಜ್ಯ ಎಸ್ಟಿ ನಿಗಮದ ನಿರ್ದೇಶಕ ಪಾವಗಡ ಪ್ರಭಾಕರ್ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಭೈರಪ್ಪ, ನಂಜೇಗೌಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement