ಪೆಟ್ರೋಲ್- ಬಸ್ ಪ್ರಯಾಣ ದರ ಏರಿಕೆಗೆ ತೀವ್ರ ಆಕ್ರೋಶ
ಕ.ಪ್ರ.ವಾರ್ತ್ಣೆ ತುಮಕೂರ್ಣು ಜೂ.16
ಕೇಂದ್ರದ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ದರ ಏರಿಕೆ, ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಸಿಪಿಐ(ಎಂ) ಸಿಐಟಿಯುನ ನೂರಾರು ಕಾರ್ಯಕರ್ತರು ಭಾನುವಾರ ಮಧ್ಯಾಹ್ನ 1 ಗಂಟೆಗೆ ತುಮಕೂರು ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ
ಕಾಂ. ಮೀನಾಕ್ಷಿಸುಂದರಂ ಅವರು ಮಾತನಾಡಿ, ಈ ಹಿಂದೆ ಪೆಟ್ರೋಲ್ ದರ ನಿಯಂತ್ರಣ ವ್ಯವಸ್ಥೆಯನ್ನು ಹಾಳು ಮಾಡಿ ನಮ್ಮ ದೇಶದಲ್ಲಿ ದೊರೆಯುವ ತೈಲವನ್ನು ಇತರೆ ದೇಶಗಳಿಗೆ ಮಾರಲು ಕಂಪನಿಗಳಿಗೆ ಅವಕಾಶ ನೀಡಿ, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಸಿದ ಕಾಂಗ್ರೆಸ್ ಸರ್ಕಾರದ ನೀತಿ ಜನವಿರೋಧಿಯಾದುದೆಂದು ಆಪಾಧಿಸಿದರು.
ಕಾಣಿಕೆ: ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ ರಾಜ್ಯ ಸರ್ಕಾರ ಜನತೆ ನಿರೀಕ್ಷೆಗಳನ್ನು ಹುಸಿಗೊಳಿಸಿ ಬೆಲೆ ಏರಿಕೆ ಕಾಣಿಕೆಗಳನ್ನು ನೀಡುತ್ತಿದೆ ಎಂದು ಛೇಡಿಸಿದರು, ಬಸ್ ಪ್ರಯಾಣದರ ಏರಿಕೆ ಅವೈಜ್ಞಾನಿಕವಾಗಿದ್ದು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ರಾಜ್ಯ ಸರ್ಕಾರ ಎಪಿಎಲ್ ಕಾರ್ಡ್ದಾರರಿಂದ ಅಕ್ಕಿ ನೀಡುವುದನ್ನು ನಿಲ್ಲಿಸುವುದು ಸರಿಯಾದ ಕ್ರಮವಲ್ಲ. ದೇಶದಲ್ಲಿ ಆಹಾರ ಭದ್ರತೆಗೆ ಜನ ಚಳವಳಿಗೆ ಒತ್ತಾಯಿಸುತ್ತಿರುವಾಗ ಈ ಕ್ರಮ ಏಕೆಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ದಿಶಾ ಲೋಕೇಶ್, ನಿಸಾರ್ ಅಹಮ್ಮದ್, ಮುನಾಫ್, ಪಾರ್ವತಮ್ಮ, ಅನುಸೂಯ, ಶೈಲಾ, ಜಿಲ್ಲಾ ಖಜಾಂಚಿ ಕಮಲ ಸೌಷಾದ್ ಸೆಹಗನ್ ಪುಟ್ಟೇಗೌಡ, ಷಣ್ಮುಖಪ್ಪ, ಬಸವರಾಜು, ಗಂಗತಾಯಮ್ಮ ಎಸ್ಎಫ್ಐ ಶಿವಣ್ಣ , ಡಿವೈಎಫ್ಐ ರಾಘವೇಂದ್ರ ತಿಮ್ಮಣ್ಣ ಮುಂತಾದವರು ಭಾಗವಹಿಸಿದ್ದರು.