ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವನ್ಯ ಪ್ರಾಣಿ ಸುರಕ್ಷಿತ ಹಿಡಿಯಲು ತಜ್ಞರ ನೇಮಕ ಅಗತ್ಯ: ಜಗದೀಶ್ ಅಭಿಮತ

Rashmi Kasaragodu
Updated On : 19 Jun 2013, 12:18 pm

ಕುಣಿಗಲ್: ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕೆಲವೆಡೆ ವನ್ಯಪ್ರಾಣಿಗಳು, ಜನವಸತಿ ಪ್ರದೇಶಕ್ಕೆ ದಾಂಗುಡಿ ಇಡುವುದು ಇತ್ತಿಚಿನ ದಿನಗಳಲ್ಲಿ ಅಧಿಕವಾಗುತ್ತಿದ್ದು, ಇಂತಹ ಸಮಯದಲ್ಲಿ ವನ್ಯ ಪ್ರಾಣಿಗಳನ್ನು ಸುರಕ್ಷಿತವಾಗಿ ಹಿಡಿಯಲು ಸೂಕ್ತ ತಜ್ಞರನ್ನು ಜಿಲ್ಲಾ ಮಟ್ಟದಲ್ಲಿ ನೇಮಿಸಿಕೊಳ್ಳುವುದು ಅವಶ್ಯಕ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತಿಳಿಸಿದರು.
ಮಂಗಳವಾರ ನಾಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಚಿರತೆ ದಾಳಿಗೆ ಒಳಗಾದ ಮನೆಯವರಿಗೆ ಸಾಂತ್ವನ ಹೇಳಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ವನ್ಯಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬಂದು ಹಲ್ಲೆ ನಡೆಸುತ್ತಿವೆ. ಇಂತಹ ಸಮಯದಲ್ಲಿ ಬೆಂಗಳೂರಿನಿಂದಲೇ ಸೂಕ್ತ ತಜ್ಞರು ಆಗಮಿಸುವ ತನಕ ಏನೊಂದು ಮಾಡದ ಸ್ಥಿತಿಯಲ್ಲಿ, ಜನತೆ ಗಾಬರಿ ಪಡುವಂತಾಗಿ, ವನ್ಯ ಜೀವಿಗಳ ಮೇಲೆ ಹಲ್ಲೆ ನಡೆಸುವುದು ಸಹಜವಾಗುತ್ತದೆ. ವನ್ಯ ಪ್ರಾಣಿಗಳನ್ನು ಸುರಕ್ಷಿತವಾಗಿ ಹಿಡಿಯಲು ಸೂಕ್ತ ಅರವಳಿಕೆ ತಜ್ಞರು, ಕಾಡು ಪ್ರಾಣಿಗಳ ಬಗ್ಗೆ ಪರಿಣಿತ ಹೊಂದಿದ ವೈದ್ಯರು, ಇವರಿಗೆ ಬೇಕಾದ ಮೂಲಭೂತ ಸಿಬ್ಬಂದಿಗಳನ್ನು ಜಿಲ್ಲಾ ಕೇಂದ್ರದಲ್ಲಿ ಇರುವಂತೆ ವ್ವವಸ್ಥೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕಲಿದ್ದು ಈ ನಿಟ್ಟಿನಲ್ಲಿ ಶಾಸಕ ಡಿ.ನಾಗರಾಜಯ್ಯನವರಿಗೆ ಹಾಗೂ ಸರ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದೆಂದರು.
ಸಿಬ್ಬಂದಿ ಕೊರತೆ: ಸೂಕ್ತ ಸಿಬ್ಬಂದಿಗಳ ಹಾಗೂ ಪರಿಕರಗಳ ಕೊರತೆಯಿಂದ ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ನುಸುಳುವುದನ್ನು ತಡೆಯಲಾಗುತ್ತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ತಾಲೂಕಿನಲ್ಲಿ 25 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶವಿದ್ದು, 12 ಮೀಸಲು ಅರಣ್ಯ ಪ್ರದೇಶ ವಲಯಗಳಿವೆ. ಇಂತಹ  ಸ್ಥಿತಿಯಲ್ಲೂ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement