ಮೇಲ್ಮನೆ ಸದಸ್ಯರೂ ಅಷ್ಟೆ
ತುಮಕೂರು: ಕೆಳಮನೆ ಸದಸ್ಯರಾಗಿರುವ ವಿಧಾನಸಭೆ ಸದಸ್ಯರಂತೂ ವಾಟರ್ಗ್ರಿಡ್ ಬಗ್ಗೆ ಸೊಲ್ಲೆತ್ತಲಿಲ್ಲ. ಬುದ್ಧಿ ಜೀವಿಗಳ ಮನೆ ಎಂದೇ ಖ್ಯಾತಿಯಾಗಿರುವ ಮೇಲ್ಮನೆಯ ವಿಧಾನಪರಿಷತ್ ಸದಸ್ಯರೂ ಉಸಿರೆತ್ತಿಲ್ಲ. ಅವರೂ ಸಹ ಅಷ್ಟೆ. ಅವರೂ ಸಹ ಉಸಿರೆತ್ತದೆ ಇರುವುದು ಜಿಲ್ಲೆಯ ದುರಂತವೇ ಸರಿ. ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷರೂ, ವಿಧಾನಪರಿಷತ್ ಸದಸ್ಯರೂ ಆಗಿರುವ ಡಾ. ಎಂ. ಆರ್. ಹುಲಿನಾಯ್ಕರ್, ಆಗ್ನೇಯ ಶಿಕ್ಷಕರ ಕ್ಷೇತ್ರದ ವೈ. ಎ. ನಾರಾಯಣಸ್ವಾಮಿ, ಪದವೀಧರ ಕ್ಷೇತ್ರದ ಡಾ.ಎ.ಎಚ್. ಶಿವಯೋಗಿಸ್ವಾವು ವಿಧಾನಪರಿಷತ್ನಲ್ಲಿದ್ದಾರೆ. ಇವರೂ ಸಹ ಅದೇ ಸೊಲ್ಲೆತ್ತದ, ಉಸಿರೆತ್ತದ ವಿಧಾನಸಭೆಯ, ಜಿಲ್ಲಾ ಪಂಚಾಯತ್ ಸದಸ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.