ಸುದ್ದಿ ಸಂಕ್ಷೇಪ
ಹಾಸ್ಯ ಸಂಗಮ
ಶಿರಾ: ಪ್ರೇರಣಾ ಫೌಂಡೇಷನ್ ತುಮಕೂರು ಸಂಸ್ಥೆಯ ವತಿಯಿಂದ ಇದೇ ಜೂ. 22 ರ ಶನಿವಾರದಂದು ಸಂಜೆ 6 ಗಂಟೆಗೆ ನಗರದ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಹಾಗೂ ಅವರ ತಂಡದವರಿಂದ ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ ಹಾಸ್ಯ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಲಾಭಿಮಾನಿಗಳು ಟಿಕೆಟ್ಗಳಿಗಾಗಿ ಮೊ- 9164548479, 8951678123 ಸಂಪರ್ಕಿಸಲು ಕೋರಲಾಗಿದೆ.
ವಿದ್ಯುತ್ ವ್ಯತ್ಯಯ
ತುರುವೇಕೆರೆ: ತುರುವೇಕೆರೆಯ ವಿದ್ಯುತ್ ಉಪಸ್ಥಾವರ 110 ಕೆವಿ ಯಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ 21ರ ಶುಕ್ರವಾರ ತುರುವೇಕೆರೆ ಉಪಸ್ಥಾವರದಿಂದ ಸರಬರಾಜಾಗುವ ಎಲ್ಲಾ ಪೂರಕ ಮಾರ್ಗಗಳನ್ನು ಸ್ಥಗಿತಗೊಳಿಸಲಾಗುವುದು. ಆದುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸಾಧ್ಯವಾಗುವುದಿಲ್ಲ ಎಂದು ಬೆಸ್ಕಾಂನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.