ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

24 ರಂದು ಬಾಲಗಂಗಾಧರ ಶ್ರೀಗಳ ಪುಣ್ಯ ಸ್ಮರಣೆ

Mainashree
Updated On : 20 Jun 2013, 11:41 am

ಕ.ಪ್ರ.ವಾರ್ತೆ  ತುರುವೇಕೆರೆ  ಜೂ. 20
ಆದಿಚುಂಚನಗಿರಿ ಶ್ರೀಗಳಾಗಿ ಭೈರವೈಕ್ಯರಾಗಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುಣ್ಯ ಸ್ಮರಣೆ ಹಾಗೂ ನೂತನ ಪೀಠಾಧಿಪತಿಗಳಾಗಿರುವ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರವಂದನಾ ಕಾರ್ಯಕ್ರಮವನ್ನು ಇದೇ ತಿಂಗಳ 24ರ ಸೋಮವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಲಭೈರವ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಪ್ರಕಟಿಸಿದ್ದಾರೆ.  
ಸಮಾರಂಭದ ಸಲುವಾಗಿ ನಿರ್ಮಾಣ ಮಾಡಲಾಗುತ್ತಿರುವ ಬೃಹತ್ ವೇದಿಕೆಯ ಪರಿಶೀಲನೆ ಮಾಡಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ನೂತನ ಪೀಠಾಧಿಪತಿಗಳಾಗಿರುವ ನಿರ್ಮಲಾನಂದನಾಥರು ಇದೇ ಜಿಲ್ಲೆಯ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬೀರನಹಳ್ಳಿ ಗ್ರಾಮದರಾಗಿರುವುದು ವಿಶೇಷವಾಗಿದೆ. ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀಗಳು ಬಾಲಗಂಗಾಧರನಾಥ ಶ್ರೀಗಳು ಹಾಕಿಕೊಟ್ಟಿರುವ ಹಾದಿಯಲ್ಲಿ ನಡೆದು ಮಠವನ್ನು ಮತ್ತೂ ಉನ್ನತ ಮಟ್ಟದಲ್ಲಿ ಬೆಳೆಸುವರು ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ತಾಲೂಕಿನ ಭಕ್ತಾದಿಗಳು ಶ್ರೀಗಳಿಗೆ ಗುರವಂದನೆ ನೀಡುವವರಿದ್ದಾರೆ. ಬೆಳಗ್ಗೆ ನಿರ್ಮಲಾನಂದನಾಥ ಸ್ವಾಮಿಗಳನ್ನು ಆದಿಚುಂಚನಗಿರಿಯಿಂದಲೇ ಸುಮಾರು 2 ಸಾವಿರ ಭಕ್ತಾದಿಗಳ ಬೈಕ್ ರ್ಯಾಲಿ ನಡೆಸಿ ಶ್ರೀಗಳನ್ನು ಪಟ್ಟಣಕ್ಕೆ ಬರಮಾಡಿಕೊಳ್ಳಲಾಗುವುದು. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಗುರುಭವನದ ಬಳಿ ನಿರ್ಮಾಣವಾಗಿರುವ ಬಿಜಿಎಸ್ ಸಭಾ ವೇದಿಕೆಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಮೆರವಣಿಗೆ ವೇಳೆ ನೂರಾರು ಕಲಾ ಜಾಥಗಳು, ವಾದ್ಯಗೋಷ್ಠಿಗಳು ನಡೆಯುವುವು. ಸಮಾರಂಭದಲ್ಲಿ ಬಾಲಗಂಗಾಧರ ಶ್ರೀಗಳ ಪುಣ್ಯ ಸ್ಮರಣೆ ಹಾಗೂ ನಿರ್ಮಲಾ ನಂದನಾಥ ಶ್ರೀಗಳಿಗೆ ಗುರುವಂದನೆ ನೀಡಲಾಗುವುದು. ಈ ಧಾರ್ಮಿಕ ಸಮಾರಂಭಕ್ಕೆ ಸುಮಾರು 50 ಸಾವಿರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಶ್ರೀಗಳಾದ ಶಿವಕುಮಾರನಾಥ ಸ್ವಾಮೀಜಿ ಹೇಳಿದರು.  ಇದೇ ವೇಳೆ ಮಠದ ವತಿಯಿಂದ ನಡೆಯುತ್ತಿರುವ ಸರಸ್ವತಿ ಶಿಕ್ಷಣ ಸಂಸ್ಥೆಯಿಂದ ನೂತನವಾಗಿ ವಿಜ್ಞಾನ ವಿಭಾಗವನ್ನು ತೆರೆಯಲು ಶ್ರೀಗಳು ಹಸಿರು ನಿಶಾನೆ ತೆರೆಯುವರು ಎಂದು ಹೇಳಿದರು.
ಈ ಸಮಾರಂಭಕ್ಕೆ ಎಲ್ಲಾ ಜನಾಂಗದ ಭಕ್ತಾದಿಗಳು ಆಗಮಿಸುವರು. ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಆಗಮಿಸುವರು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ ಹೇಳಿದರು. ತಾಲೂಕಿನ ಭಕ್ತಾದಿಗಳ ವತಿಯಿಂದ ನಿರ್ಮಲಾನಂದ ನಾಥ ಸ್ವಾಮೀಜಿಗಳಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಲಾಗುವುದು. ಸಮಾರಂಭಕ್ಕೆ ಆಗಮಿಸುವ ಸಮಸ್ತ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನೂ ಸಹ ಮಾಡಲಾಗುವುದು ಎಂದು ಕಾರ್ಯದರ್ಶಿ ಕೊಂಡಜ್ಜಿ ವಿಶ್ವನಾಥ್ ಹೇಳಿದರು. ವಕೀಲ ಧನಪಾಲ್, ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ ಟಿ.ಎಸ್.ದಾನೀಗೌಡ, ಪ್ರಾಂಶುಪಾಲ ಎಂ.ಎನ್. ಚಂದ್ರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಆಂಜನಪ್ಪ, ದಂಡಿನಶಿವರ ಶಂಕರೇಗೌಡ, ಸುಂಕಲಾಪುರ ಶಂಕರಪ್ಪ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement