ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲೆ, ಸಂಸ್ಕೃತಿ, ಸಾಹಿತ್ಯ ಸಮಾಜದ ವಿದ್ಯಮಾನಗಳ ಪ್ರತಿರೂಪ

Mainashree
Updated On : 20 Jun 2013, 11:40 am

ಮಧುಗಿರಿ: ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಸಮಾಜದ ವಿದ್ಯಮಾನಗಳನ್ನು ಧ್ವನಿಸುತ್ತದೆ. ಇವುಗಳನ್ನು ಪೂರ್ಣವಾಗಿ ತೊಡಗಿಸಿಕೊಂಡು ಸಾಧಕರು ಮಾನವ ಸಂವೇದಿ ಭಾವನೆ ವ್ಯಕ್ತಪಡಿಸಿ ಅಂತರಂಗದ ಅನುಭವ ಅನಾವರಣ ಮಾಡುತ್ತಾರೆ ಎಂದು ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಿರ್ಮಾಣವಾಗುತ್ತಿರುವ  ಅಂದಾಜು 1 ಕೋಟಿ 10 ಲಕ್ಷ ರು.ವೆಚ್ಚದ ಕನ್ನಡ ಭವನ ಕಟ್ಟಡದ ವಿನ್ಯಾಸವನ್ನು ಅನಾವರಣಗೊಳಿಸಿ ಮಾತನಾಡಿದರು. ಕನ್ನಡ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ ಇನ್ನು ಅನೇಕ ಪ್ರಾತಿನಿಧಿಕ ಸಂಸ್ಥೆಯಾದ ತಾ.ಕಸಾಪ ತಾಲೂಕಿನಾದ್ಯಂತ ಕನ್ನಡ, ನಾಡು, ನುಡಿ ಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂದ ಅವರು, ಇಂತಹ ಸಾಂಸ್ಕೃತಿಕ ಚಟುವಟಿಕೆ ಸಾದರ ಪಡಿಸಲು ಕನ್ನಡ ಭವನ ಇಲ್ಲದಿರುವುದನ್ನು ಮನಗಂಡು ಮಧುಗಿರಿ ಪಟ್ಟಣದ ಹೃದಯ ಭಾಗದಲ್ಲಿ 1 ಕೋಟಿ 10 ಲಕ್ಷ ರು. ವೆಚ್ಚದಲ್ಲಿ ಕನ್ನಡ ಭವನ ಕಟ್ಟಡ ಕಟ್ಟಲು ಯೋಜನೆ ರೂಪಿಸಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾ.ಮಹಾಲಿಂಗೇಶ್, ಪ್ರಧಾನ ಕಾರ್ಯದರ್ಶಿ ಅಮರಾವತಿ ದ್ರೇಹಾಚಾರ್, ಮಾಜಿ ಅಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ಕಿರುತೆರೆ ಕಲಾವಿದ  ರಂಗನಾಥ್, ಪತ್ರಕರ್ತ ಬಂಡಿಚೌಡಯ್ಯ, ಸುನೀಲ್, ಬಸವರಾಜು, ಸತ್ಯನಾರಾಯಣ,ಅಲ್ಲಾ ಭಕ್ಷ್, ರಮೇಶ್, ಸುರೇಶ್, ರಾಮಚಂದ್ರ  ಇನ್ನು ಅನ್ಷ್ಕರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement