ಗರ್ಭಿಣಿ ಕರಡಿಗೆ ಗುಂಡೇಟು: ಬೇಟೆಗಾರರು ಪರಾರಿ
ಗುಬ್ಬಿ: ಕಾಡುಹಂದಿಯ ಬೇಟೆಗಾರರು ಹಾರಿಸಿದ ಗುಂಡಿಗೆ ಗರ್ಭಧರಿಸಿದ ಕರಡಿಯೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಾಲೂಕಿನ ಹಾಗಲವಾಡಿ ಹೋಬಳಿಯ ಗಂಗಯ್ಯನಪಾಳ್ಯ ಮಠ ಗ್ರಾಮದಲ್ಲಿ ನಡೆದಿದೆ. ಗಂಗಯ್ಯನಪಾಳ್ಯ ಮಠದ ಕರಿಯಪ್ಪನ ಜವೀನಿನಲ್ಲಿ ಕಾಡುಹಂದಿಯ ಬೇಟೆಗಾರರು ಕರಡಿಗೆ ಬಂದೂಕಿನಿಂದ ಗುಂಡು ಹಾರಿಸಿದರು. ಆ ವೇಳೆಗೆ ಜನರು ಬರುತ್ತಿರುವುದನ್ನು ಕಂಡ ಕಾಡುಹಂದಿಯ ಬೇಟೆಗಾರರು ಪರಾರಿಯಾಗಿದ್ದರೆ. ಗುಂಡಿಗೆ ಗರ್ಭಿಣಿ ಕರಡಿ ತೀವ್ರ ಗಾಯಗೊಂಡಿತು. ಕರಡಿಯನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆಧಿಕಾರಿಗಳು ಮತ್ತು ಸಿಬ್ಬಂದಿ ಕರಡಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕೆತ್ಸೆಗಾಗಿ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಗುಬ್ಬಿ ಅರಣ್ಯ ಅಧಿಕಾರಿ ಹರೀಶ್, ಅರಣ್ಯ ರಕ್ಷಣಾಧಿಕಾರಿಗಳಾದ ಬಸವರಾಜು, ವೆಂಕೋಜಿರಾವ್, ಚೇಳೂರಿನ ಎಎಸ್ಐ ಶಿವಣ್ಣ ಭೇಟಿ ನೀಡಿ ಪರಿಶೀಲಿಸಿ, ಕಾಡುಹಂದಿಯ ಬೇಟೆಗಾರರನ್ನು ಹಾಗೂ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.