ಜಿಲ್ಲಾ ಕೇಂದ್ರ ಆಗಲಿ:ಡಾ.ದೊಡ್ಡರಂಗೇಗೌಡ
ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಧುಗಿರಿ ಜಿಲ್ಲಾ ಕೇಂದ್ರ ಆಗಬೇಕು. ಎತ್ತಿನ ಹೊಳೆ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕು. ಪ್ರವಾಸೋದ್ಯಮ ಕೇಂದ್ರವಾಗಬೇಕು. ನಲ್ಮೆಯ ಮಧುಗಿರಿ ಅನುಭವದ ತೊಟ್ಟಿಲು ಎಂದರು.
ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.ಪ್ರೊ.ಮ.ಲ.ನ.ಮೂರ್ತಿ, ಸಂಸದ ಜಿ.ಎಸ್. ಬಸವರಾಜು, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ರಾಮಣ್ಣ, ಪಿ.ಸಿ.ಕೆ.ರೆಡ್ಡಿ, ಡಿಡಿಪಿಐ ಆಂಜನಪ್ಪ, ಜಿ.ಪಂ.ಸದಸ್ಯ ಎಚ್.ಕೆಂಚಮಾರಯ್ಯ, ಸುಮನ, ಮಂಜುಳಾ, ಬಿಇಓ ವೈ.ಎನ್.ರಾಮಕೃಷ್ಣಯ್ಯ, ತಾ.ಪಂ.ಯಶೋಧ ರಾಜಣ್ಣ, ಇಓ ಮಹಾಲಿಂಗಯ್ಯ, ಸಿಡಿಪಿಓ ಸೋಮಸುಂದರ್ ಅನೇಕರು ಉಪಸ್ಥಿತರಿದ್ದರು. ಅಮರಾವತಿ ದ್ರೇಹಾಚಾರ್ ಸ್ವಾಗತಿಸಿದರು.