ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಸಿಬಿ ಮೂಲಕ ಕಾಮಗಾರಿ: ಕಟ್ಟಡ ಕುಸಿಯುವ ಆತಂಕ

Mainashree
Updated On : 20 Jun 2013, 11:41 am

ಕ.ಪ್ರ.ವಾರ್ತೆ  ತುಮಕೂರು  ಜೂ. 20
ಚರಂಡಿಗಾಗಿ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಪಾಯ ಭದ್ರತೆಯಿಲ್ಲದ ಕಾರಣ ಕಟ್ಟಡವೊಂದು ಕುಸಿಯುವ ಸ್ಥಿತಿ ತಲುಪಿರುವ ಘಟನೆ ಕ್ಯಾತ್ಸಂದ್ರದ ಕಡೇಪೇಟೆಯಲ್ಲಿ ನಡೆದಿದೆ.
ಹಲವಾರು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಹೊಂದದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕ್ಯಾತ್ಸಂದ್ರದ ಪೇಟೆ ಬೀದಿ ಮತ್ತು ಕಡೇ ಪೇಟೆ ಬೀದಿಗಳಲ್ಲಿ ಚರಂಡಿ ಕಾಮಗಾರಿ ಜೊತೆಗೆ ರಸ್ತೆ ಅಗಲೀಕರಣ ಕಾಮಗಾರಿ ಕಳೆದೆರೆದು ದಿನಗಳಿಂದ ನಗರಸಭೆ ಆರಂಭಗೊಳಿಸಿದೆ. ಕಡೇ ಪೇಟೆಯಲ್ಲಿ ಮಂಗಳವಾರ ರಾತ್ರಿ ಚರಂಡಿ ಕಾಮಗಾರಿಯನ್ನು ಜೆಸಿಬಿ ಮೂಲಕ ನಡೆಸುತ್ತಿದ್ದಾಗ ಪಾಯ ಭದ್ರತೆ ಇಲ್ಲದ ಕಾರಣ ಯಾರಬ್ ಫೆನ್ಸಿಂಗ್ ಅಂಡ್ ವುಡ್ ವರ್ಕ್ಸ್‌ನ ಬೃಹತ್ ಕಟ್ಟಡವು ಕುಸಿಯುವ ಸ್ಥಿತಿ ಮುಟ್ಟಿದೆ. ಈ ಕಟ್ಟಡ ಯಾವುದೇ ಸಂದರ್ಭದಲ್ಲಾದರೂ ಬೀಳುವ ಹಂತ ಮುಟ್ಟಿದ್ದು ಇದರಿಂದಾಗಿ ಈ ಕಟ್ಟಡದೊಳಗೆ ಯಾರೊಬ್ಬರು ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವುಡ್ ವರ್ಕ್ಸ್ ಕೆಲಸ ಸ್ಥಗಿತಗೊಂಡಿದೆ. ತಮ್ಮ ಕಟ್ಟಡ ಕುಸಿಯುವ ಸ್ಥಿತಿ ತಲುಪುವುದಕ್ಕೆ ನಗರಸಭೆಯವರೇ ಜವಾಬ್ದಾರರಾರಗಿದ್ದು ನಗರಸಭೆಯವರು ಪರಿಹಾರ ನೀಡಬೇಕೆಂದು ಕಟ್ಟಡದ ಮಾಲೀಕ ರಿಯಾಜ್ ಅಹ್ಮದ್ ತಿಳಿಸಿದ್ದಾರೆ.
ಧರಣಿ ನಡೆಸುವ ಎಚ್ಚರಿಕೆ: ನಗರಸಭೆಯವರು ತಕ್ಷಣ ಪರಿಹಾರ ನೀಡಲು ಮುಂದಾಗದಿದ್ದರೆ ಕಚೇರಿ ಮುಂದೆ ಧರಣಿ ನಡೆಸುವುದಾಗಿ ರಿಯಾಜ್ ಅಹ್ಮದ್ ಎಚ್ಚರಿಸಿದ್ದಾರೆ. ನಗರಸಭೆ ಆಯುಕ್ತ ನಾರಾಯಣಪ್ಪ, ಎಇಇ ಗಳಾದ ಪ್ರಕಾಶ್, ಅಧಿಕಾರಿಗಳಾದ ಮಂಜುನಾಥ್ ಮತ್ತಿತರರು ಕ್ಯಾತ್ಸಂದ್ರದ ಕಡೇಪೇಟೆ ಸೇರಿದಂತೆ ಪೇಟೆ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಪರಿಶೀಲಿಸಿದರು. ಪೇಟೆಬೀದಿಯಲ್ಲಿ ರಸ್ತೆ ಅಗಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಕೆಲ ಕಟ್ಟಡಗಳನ್ನು ವರ್ಷದ ಹಿಂದೆಯೇ ತೆರವುಗೊಳಿಸಲಾಗಿತ್ತು. ಇದರಿಂದಾಗಿ ಮಳೆ ಬಂದರೆ ಪೇಟೆ ಬೀದಿಯಲ್ಲಿ ಮಿನಿ ಕೆರೆಯಂತೆ ನೀರು ನಿಲ್ಲುತ್ತಿತ್ತು. ನೂತನ ಶಾಸಕ ಡಾ. ರಫೀಕ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದನ್ನು ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement