ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿಷ್ಠೆಯಿಂದ ಕಾರ್ಯ ನಿರ್ವಹಿಸಿದಾಗ ಅಭಿವೃದ್ಧಿ ಸಾಧ್ಯ: ಜನಾರ್ದನ ಸ್ವಾಮಿ

Mainashree
Updated On : 20 Jun 2013, 11:38 am

ಶಿರಾ: ಜನಪ್ರತಿನಿಧಿಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಜನಾರ್ದನ ಸ್ವಾಮಿ ಹೇಳಿದರು.
ಅವರು ಪಟ್ಟಣದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳ ವ್ಯಾಸಂಗದ  ಕಷ್ಟ ಏನೆಂಬುದರ ಅರಿವು ತಮಗಿದೆ ನೀರಿನ ವಿಚಾರ, ರೈಲು ಮಾರ್ಗಗಳಂತಹ ಕಾಮಗಾರಿಗಳು ಈ ಭಾಗದಲ್ಲಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸರ್ಕಾರದ ಸವಲತ್ತುಗಳನ್ನು ನಿಷ್ಠೆಯಿಂದ ಜನರಿಗೆ ತಲುಪಿಸುವ ಜವಾಬ್ದಾರಿ ಕೆಲಸ ಜಾತಿ ಮತ ಭೇದಗಳಿಲ್ಲದೆ ಅಭಿವೃದ್ಧಿ ಮಾಡುವ ಕಾರ್ಯವಾಗಬೇಕು ಎಂದರು.
ನಮ್ಮ ರಾಷ್ಟ್ರದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿಹಿಡಿಸುವಂತಹ ಕಾರ್ಯಗಳನ್ನು ವಿದ್ಯಾರ್ಥಿಗಳು ಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕು. ವೈಜ್ಞಾನಿಕ ಪ್ರಗತಿಗೆ ಚಿಂತಿಸಬೇಕು. ಒಣ ರಾಜಕೀಯದಿಂದ ಉತ್ತಮ ಸಮಾಜ  ನಿರ್ಮಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಸಂಗತಿ ಎಂದರು.  ಯುವ ಮುಖಂಡರಾದ ಡಿ.ಸಿ.ಅಶೋಕ್, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಬಾಂಬೆ ರಾಜಣ್ಣ, ಮಾತನಾಡಿದರು.
ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಜಿ.ಲಿಂಗಯ್ಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕ ಜಿ.ಎಸ್.ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಪ್ರಕಾಶ್ ಗೌಡ, ಜಿ.ಎನ್.ದೇವರಾಜು, ಜಿ.ಎಲ್.ರಾಮಣ್ಣ, ಟಿ.ಗೋವಿಂದಯ್ಯ, ಮಲ್ಲಪ್ಪ, ಭೂತರಾಜ್, ಸುಧಾಕರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೂಜಿತ ಪ್ರಾರ್ಥಿಸಿ, ಜಿ.ಎಸ್.ರವಿ ಪ್ರಾಸ್ತವಿಕ ಭಾಷಣ ಮಾಡಿದರು, ಉಪನ್ಯಾಸಕ ಎಂ.ಲೋಕನಾಥ್ ನಿರೂಪಿಸಿದರು, ಪ್ರಾಚಾರ್ಯ ಕೆ.ಸೋಮಶೇಖರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement