ಯಶಸ್ವಿ ನಾಟಕ ಪ್ರದರ್ಶನ
ತುಮಕೂರು: ಇಲ್ಲಿಗೆ ಸಮೀಪ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಡಮರುಗ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಅಲೆಗಳಲ್ಲಿ ರಾಜಹಂಸಗಳು ನಾಟಕ ಪ್ರದರ್ಶನ ಪ್ರದರ್ಶನಗೊಂಡಿತು.
ಗೌತಮ ಬುದ್ಧನ ಪ್ರಭಾವಳಿ ಮತ್ತು ಅಂದಿನ ಸಂದಿಗ್ಧ ಸನ್ನಿವೇಶದಲ್ಲಿ ಸಿದ್ದಾರ್ಥನ ಮನಸ್ಸಿನಲ್ಲಿನ ತುಮುಲ ಮತ್ತು ಬೌದ್ಧ ಧರ್ಮದ ಬಗೆಗಿನ ಹಲವು ಮನಸ್ಸುಗಳು ಎತ್ತಿರುವ ಇಂದಿನ ಪ್ರಶ್ನೆಗಳು ಕಂಡುಕೊಳ್ಳಲೆತ್ನಿಸಿದ ವಿಚಾರಗಳು ಈ ನಾಟಕದಲ್ಲಿ ಬಿಂಬಿತವಾದವು.
ನಾಟಕಕಾರರದ ಮೋಹನ್ ರಾಕೇಶ್ ಅವರ ಈ ನಾಟಕ ಕೃತಿಯನ್ನು ನಿರ್ದೇಶಕ ಮಹದೇವ ಹಡಪದರ ನಿರ್ದೇಶನದಲ್ಲಿ ಈ ನಾಟಕ ನಡೆಯಿತು. ಸರಳ ರಂಗಸಜ್ಜಿಕೆ ಗಮನಸೆಳೆಯಿತು. ಬುದ್ಧನ ಪಾತ್ರದಲ್ಲಿ ಬಿ. ಅರುಣಕುಮಾರ್ ಮಾನ್ವಿ, ಕುಮಾರನ ಪಾತ್ರದಲ್ಲಿ ಅವಿನಾಶ ರೈ, ಸುಂದರಿ ಪಾತ್ರದಲ್ಲಿ ಅಕ್ಷತಾ, ಶಾಮಾಂಗನ ಪಾತ್ರದಲ್ಲಿ ಮಂಜು ಹಿರೇಮಠ್, ಅಲಕಾಳ ಪಾತ್ರದಲ್ಲಿ ಶೀಲ ಎನ್. ಕುರುವಂತೆ ಮನೋಜ್ಞವಾಗಿ ಅಭಿನಯಿಸಿದರು.
ಠಾಕೂರ್ ಅವರ ಬೆಳಕಿನ ಸಂಯೋಜನೆ, ಮೂರ್ತಿ ವಿ.ಎಸ್. ಅವರ ಸಂಗೀತ ನಾಟಕಕ್ಕೆ ಪೂರಕವಾಗಿತ್ತು. ಡಮರುಗ ತಂಡದ ದೇವರಾಜ್ ಮೆಳೇಹಳ್ಳಿ ನಟರನ್ನು ಅಭಿನಂದಿಸಿದರು.