ರಾಹುಲ್ ಗಾಂಧಿ ಹುಟ್ಟು ಹಬ್ಬಕ್ಕೆ ಹಾಲು ಬ್ರೆಡ್ ವಿತರಣೆ
ತುರುವೇಕೆರೆ: ಕಾಂಗ್ರೆಸ್ನ ಯುವ ರಾಜ ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ರೋಗಿಗಳಿಗೆ ಹಾಲು ಬ್ರೆಡ್ ವಿತರಣೆ ಮಾಡುವ ಮೂಲಕ ಆಚರಿಸಿದರು.
ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಭೇಟಿ ಮಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಬಿ.ಹನುಮಂತಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಪಟ್ಟಣ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಮೊದಲಾದ ಮುಖಂಡರು ಬ್ರೆಡ್ ಹಾಗೂ ಹಾಲನ್ನು ವಿತರಣೆ ಮಾಡಿದರು. ಲೋಟದಲ್ಲಿ ಹಾಲು ವಿತರಣೆ ಮಾಡುವ ಬದಲು ಅರ್ಧ ಲೀಟರ್ ಪ್ಯಾಕೆಟ್ಗಳನ್ನೇ ರೋಗಿಗಳಿಗೆ ನೀಡಿದುದು ವಿಶೇಷವಾಗಿತ್ತು.