ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖರ್ಗೆಗೆ ರೈಲ್ವೆ ಖಾತೆ: ಸಂತಸ

Rashmi Kasaragodu
Updated On : 23 Jun 2013, 12:13 pm

ಹುಳಿಯಾರು: ರೈಲ್ವೆ ಖಾತೆಯನ್ನು ಕರ್ನಾಟಕದ ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದು  ರೈಲ್ವೆ ಬೋರ್ಡ್ ಮಾಜಿ ಸದಸ್ಯ ಹುಳಿಯಾರಿನ ರಹಮತ್ ಉಲ್ಲಾ ಸಾಬ್ ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳನ್ನು  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ  ಅಭಿವೃದ್ಧಿಪಡಿಸುವುದಾಗಿ ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು. ಶುಕ್ರವಾರ ತಾಲೂಕಿನ ದೊಡ್ಡೇರಿ ಹೋಬಳಿ ಮಾಯಗೊಂಡನಹಳ್ಳಿ-ಹೊನ್ನಾಪುರ ಸಂಪರ್ಕ ರಸ್ತೆಗೆ 1 ಕೋಟಿ 27 ಲಕ್ಷ ರು.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ರಸ್ತೆಗಳು ಕಳೆದ ಐದು ವರ್ಷಗಳಲ್ಲಿ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರು, ಪ್ರಯಾಣಿಕರು ಓಡಾಡಲು ಆಗದಷ್ಟು ಕೆಟ್ಟು ನಿಂತಿವೆ. ಆದಕಾರಣ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮಾಯಗೊಂಡನಹಳ್ಳಿ-ಹೊನ್ನಾಪುರ ಸಂಪರ್ಕ ರಸ್ತೆಯನ್ನು 1ಕೋಟಿ 27 ಲಕ್ಷ ರು.ವೆಚ್ಚದಲ್ಲಿ ಅಬಿವೃದ್ಧಿಪಡಿಸುವುದಾಗಿ ತಿಳಿಸಿದ ಅವರು, ಅದೇ ರೀತಿ ಎಲ್ಲ ರಸ್ತೆ ಅಭಿವೃದ್ಧಿ ಪಡಿಸಲು  ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಗ್ರಾಮೀಣ ಮತ್ತು ಗಡಿ ಭಾಗದ  ಸಂಪರ್ಕ ರಸ್ತೆಗಳನ್ನು ಗುರುತಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿ, ಜನರು ಹೋದೆಲ್ಲೆಲ್ಲಾ ಮನೆ, ನಿವೇಶನ, ಪಡಿತರ ಚೀಟಿ, ಮಾಸಶಾನಕ್ಕಾಗಿ ಅರ್ಜಿ ನೀಡುತ್ತಿದ್ದು ಇದಕ್ಕೆ ಪರಿಹಾರ ಒದಗಿಸಿ ಮುಂದಿನ 6 ತಿಂಗಳಲ್ಲಿ ಇಂತಹ ಸಮಸ್ಯಗಳು ಬರದ ಹಾಗೇ ನೋಡಿಕೊಳ್ಳುವುದಾಗಿ ರಾಜಣ್ಣ ಭರವಸೆ ನೀಡಿದರು. ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗುಟ್ಟೆ ಚಿಕ್ಕರಂಗಪ್ಪ, ತಾ.ಪಂ.ಸದಸ್ಯ ಬಿ.ಜಯದೇವ್, ರಂಟವಳಲು ಗ್ರಾ.ಪಂ.ಅಧ್ಯಕ್ಷ ಆರ್.ಕೆ.ಧ್ರುವಕುಮಾರ್, ಕೆಂಚಣ್ಣ, ರಂಗಪ್ಪ, ಮುಖಂಡ ಚಿನ್ನಪ್ಪ , ಎಇಇ ಲೋಕೇಶ್ ಕೆಂಚಣ್ಣ   ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement