ರಾಷ್ಟ್ರೀಯ ಜಾಗೃತಿ ಪರಿಸರ ಆಂದೋಲನ
ಅರಸೀಕೆರೆ: ನಮ್ಮ ಪೂರ್ವಿಕರು ಪ್ರಾಣಿ, ಪಕ್ಷಿ, ಮರಗಿಡಗಳನ್ನು ದೇವರ ಸಮಾನ ಎಂದು ಪೂಜಿಸುವ ಮೂಲಕ ನಿಸರ್ಗದಲ್ಲಿ ದೇವರನ್ನು ಕಾಣುತ್ತಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಹೇಳಿದರು. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಜಾಗೃತಿ ಪರಿಸರ ಆಂದೋಲನ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾಚನಾಡಿದರು.
ವಿಜ್ಞಾನ ಪರಿಷತ್ ಮತ್ತು ಶಾಲಾಭಿವೃದ್ಧಿ ಸಮಿತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಂದಿನ ದಿನಗಳಲ್ಲಿ ನಿಸರ್ಗದ ಮೇಲೆ ನಾವು ಅಮಾನವೀಯವಾಗಿ ನಡೆದು ಕೊಳ್ಳುತ್ತಿರುವ ದೆಸೆಯಿಂದಾಗಿ ವಾತಾವರಣ ಕಲುಷಿತಗೊಂಡಿದೆ.
ಮುಂದಿನ ಪೀಳಿಗೆ ಪರಿತಪಿಸುವ ನಿಟ್ಟಿನಲ್ಲಿ ನಾವಿಂದು ಸಾಗುತ್ತಿದ್ದೇವೆ. ಇದಕ್ಕೆ ಪರಿಹಾರವೆಂದರೆ ನಾವು ಮರ ಬೆಳೆಯಲಾಗದಿದ್ದರೂ ಇರುವ ಪ್ರಕೃತಿ ಸಂಪತ್ತನ್ನಾದರೂ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.