ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದಲಿತ ಕುಟುಂಬಗಳಿಗೆ ಸೂಕ್ತ ರಸ್ತೆಮಾರ್ಗ ಕಲ್ಪಿಸಿ

Rashmi Kasaragodu
Updated On : 24 Jun 2013, 12:35 pm

ಕ.ಪ್ರ.ವಾರ್ತೆ   ಕುಣಿಗಲ್   ಜೂ. 23
ತಾಲೂಕಿನ ಅಮೃತೂರು ಗ್ರಾಮದಲ್ಲಿನ ಕೊಡಿಗೆಹಳ್ಳಿಯಲ್ಲಿನ ಹತ್ತಾರು ಎಕರೆಯನ್ನು ಹೊಂದಿರುವ ದಲಿತ ಕುಟುಂಬಗಳಿಗೆ ಸೂಕ್ತ ರಸ್ತೆಮಾರ್ಗ ಕಲ್ಪಿಸುವಲ್ಲಿ ಕಂದಾಯ ಇಲಾಖಾಧಿಕಾರಿಗಳು ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜೈಭೀಮ್ ಫೌಂಡೇಶನ್ನ ಮುಖ್ಯಸ್ಥ ರಾಮಲಿಂಗಯ್ಯ ಎಚ್ಚರಿಸಿದ್ದಾರೆ.
ಭಾನುವಾರ, ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಅಮೃತೂರು ಗ್ರಾಮದ ಪ್ರವೇಶದಲ್ಲಿನ ಕೊಡಿಗೆಹಳ್ಳಿ ಸರ್ವೇ ನಂಬರಿ 121, 122ರ ಪೈಕಿ ಹತ್ತಾರು ಎಕರೆ ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ದಲಿತ ಕುಟುಂಬಗಳು ಕಳೆದ ಹಲವು ತಲೆಮಾರುಗಳಿಂದಲೂ ಉಳುಮೆ ಮಾಡಿಕೊಂಡು ಬರುತ್ತಿದ್ದು, ಸದರಿ ಜಮೀನುಗಳಿಗೆ ತೆರಳಲು ಸರ್ವೇ ನಂಬರ್ 128ರ ಮೂಲಕ ಹೋಗಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲೆ ವ್ಯಕ್ತಿಗಳು, ದಲಿತರು ಹೋಗಿ ಬರುತ್ತಿದ್ದ ರಸ್ತೆ ಮಾರ್ಗಕ್ಕೆ ಬೇಲಿಹಾಕಿಕೊಂಡು ಕಿರುಕುಳ ನೀಡುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗದ ಕಾರಣ ದಲಿತ ಕುಟುಂಬಗಳು ಜಮೀನಿದ್ದರೂ ಸೂಕ್ತ ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಇನ್ನೊಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಮಯ್ಯ, ಬೋರಯ್ಯ,ಶ್ರೀನಿವಾಸ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement