ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ವಿದ್ಯುತ್ ಎಂಜಿನಿಯರ್ಗಳ ಬೇಡಿಕೆ ಹೆಚ್ಚಾಗಲಿದೆ'

Rashmi Kasaragodu
Updated On : 24 Jun 2013, 12:34 pm

ತುಮಕೂರು: ಪ್ರಪಂಚದಾದ್ಯಂತ ವಿದ್ಯುತ್ ಎಂಜಿನಿಯರ್ಗಳ ಬೇಡಿಕೆ ಹೆಚ್ಚಾಗಲಿದೆ ಎಂದು ಬೆಂಗಳೂರಿನ ಎಬಿಬಿ ಉಪಾಧ್ಯಕ್ಷ ಪ್ರಸನ್ನ ನರಸಿಂಹನ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದಿಂದ ಆಯೋಜಿಸಿದ್ದ ಇಂಡಸ್ಟ್ರಿ, ಇನ್ಸ್ಟಿಟ್ಯೂಟ್ ಇನ್ಟ್ರ್ಯಾಕ್ಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಬಿಬಿ ಸಂಸ್ಥೆ ಬೆಂಗಳೂರು ಹಾಗೂ ದೇಶಾದ್ಯಂತ ತಮ್ಮ ತಾಂತ್ರಿಕ ಸಲಹೆಯನ್ನು ವಿವಿಧ ಕೈಗಾರಿಕೆಗಳಾದ ಪೇಪರ್ ಮಿಲ್, ಸಿಮೆಂಟ್, ಕಬ್ಬಿಣ, ವಿದ್ಯುತ್ ವಲಯ ಹಾಗೂ ಇತರೆ ವಲಯಗಳಲ್ಲಿ ನೀಡುತ್ತಿರುವುದರ ಕುರಿತು ವಿವರಣೆ ನೀಡಿದರು. ತಾಂತ್ರಿಕ ವಲಯದಲ್ಲಿ ಹೆಚ್ಚುತ್ತಿರುವ ಸಂಶೋಧನೆ ಬಗ್ಗೆ ಪ್ರಸ್ತಾಪಿಸಿದ ಅವರು ಅಸ್ಸಾಂನಲ್ಲಿರುವ ಉಕ್ಕು-ಕಾರ್ಖಾನೆಯ ಯಂತ್ರವನ್ನು ಬೆಂಗಳೂರಿನಲ್ಲಿ ಕುಳಿತು ನಿಯಂತ್ರಿಸಲಾಗುತ್ತಿದೆ. ಇದರಿಂದ ಮಾನವ ಸಂಪನ್ಮೂಲ ಕಡಿತಗೊಳಿಸಿ ಉತ್ಪಾದನೆ ಹೆಚ್ಚಿಸಲಾಗಿದೆ ಎಂದರು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆ ಮಾಡಲು ಉತ್ತೇಜನ ನೀಡಬೇಕು. ಇದರಿಂದ ದೇಶಕ್ಕೆ ನೆರವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಕೆ.ಎ. ಕೃಷ್ಣಮೂರ್ತಿ, ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ, ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ. ಬಿ. ರಾಜೇಶ್ ಕಾಮತ್ ಹಾಗೂ ಪ್ರೊ. ಕೆ.ಎಲ್. ರತ್ನಾಕರ್ ಅವರು ಉಪಸ್ಥಿತರಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕರ ಭೇಟಿ
ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕರಾದ ಕೆ.ಷಡಕ್ಷರಿಯವರು ಭೇಟಿ ನೀಡಿ ಕಾಲೇಜಿನ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪರಿಶೀಲಿಸಿದರು.  ಬೋಧನಾ, ಪ್ರಯೋಗಾಲಯ ಕೊಠಡಿಗಳ ನಿರ್ಮಾಣದ ಬಗ್ಗೆ ಕಾಲೇಜಿನ ಪ್ರಾಂಶುಪಾಲರ ಜೊತೆ ಚರ್ಚಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜೊತೆ ಮಾತನಾಡಿ ಆದಷ್ಟು ತುರ್ತಾಗಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲು ತಿಳಿಸಿದರು. ಇದೇ ಸಂದರ್ಭದಲ್ಲಿ ಕೊಠಡಿಗಳ ಕೊರತೆಯ ನಡುವೆಯೂ ಉತ್ತಮ ಫಲಿತಾಂಶ ತರಲು ಹಾಗೂ ಎಲ್ಲಾ ವರ್ಗದವರಿಗೂ ದಾಖಲಾತಿ ನೀಡುವ ಮೂಲಕ ಕಾಲೇಜಿನ ಏಳಿಗೆಯ ಬಗ್ಗೆ ಶ್ರಮಿಸುತ್ತಿರುವ ಪ್ರಾಂಶುರಾಲದ ಡಾ.ಜಯದೇವಪ್ಪ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement