ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಇಇ ಸಮರ್ಥಿಸಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ

Rashmi Kasaragodu
Updated On : 25 Jun 2013, 12:04 pm

ಕುಣಿಗಲ್: ಲೋಕೋಪಯೋಗಿ ಇಲಾಖೆಯ ಎಇಇ ಯವರ ವರ್ಗಾವಣೆಗೆ ಸಂಚು ರೂಪಿಸುತ್ತಿರುವ ಬಗ್ಗೆ ತಾಲೂಕು ಕಾಂಗ್ರೆಸ್ನ ಸೇವಾದಳದ ಅಧ್ಯಕ್ಷರು ಸಮರ್ಥಿಸಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ತರೇದಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ತಿಳಿಸಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಅವರು ಕಾಂಗ್ರೆಸ್ ಸೇವಾದಳ ತುಂಬಾ ಹಳೇಯ ಸಂಘಟನೆಯಾಗಿದ್ದು , ಜನಸೇವೆಗೆ ಮುಡಿಪಾಗಿದ್ದ ಹರ್ಡಿಕರ್ರಂತಹ ಮಹಾನುಭವರು ಸ್ಥಾಪಿಸಿದ ಸಂಘಟನೆಯಾಗಿದೆ. ಇಂತಹ ಸಂಘಟನೆಯ ಅಧ್ಯಕ್ಷರಾಗಿ, ಸರ್ಕಾರದ ವಶದಲ್ಲಿದ್ದ ಮರಳು ದುರುಪಯೋಗದಲ್ಲಿ ಪಾಲ್ಗೊಂಡಿರುವ ಲೋಕೋಪಯೋಗಿ ಎಇಇ ರವರನ್ನು ಸಮರ್ಥಿಸಿ ಕೊಳ್ಳುವಂತೆ ಹೇಳಿಕೆ ನೀಡಿರುವುದಕ್ಕೆ ಹಾಸ್ಯಾಸ್ಪದವಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳು ಪೋಲಾಗಿರುವುದು ತಾಲೂಕಿನಲ್ಲಿ ಚರ್ಚೆಯ ವಿಷಯವಾಗಿದ್ದರೂ, ಸೇವಾದಳದ ಅಧ್ಯಕ್ಷ ಲಕ್ಷ್ಮಣಗೌಡ ಸಮರ್ಥನೆ ಹೇಳಿಕೆ ಖಂಡನೀಯ. ಇದಕ್ಕಾಗಿ ಅವರು, ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುವಂತೆ ಮತ್ತು ಸೇವಾದಳದ ಮುಖ್ಯಸ್ಥರು ಸದರಿಯವರನ್ನು ತಾಲೂಕು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದಾರೆ.
ಗೃಹಿಣಿ ನಾಪತ್ತೆ
ಹುಳಿಯಾರು: ತವರು ಮನೆಗೆ ಬಂದಿದ್ದ ಹೆಣ್ಣು ಮಗಳು ತನ್ನ ಎರಡು ವರ್ಷದ ಮಗು ಮತ್ತು ಗಂಡನನ್ನು ತೊರೆದು ಕಾಣೆಯಾಗಿರುವ ಘಟನೆ ಹೋಬಳಿಯ ಕೆ.ಸಿ.ಪಾಳ್ಯದಲ್ಲಿ ನಡೆದಿದೆ. ತಿಪಟೂರು ತಾಲೂಕು ನೋಣವಿನ ಕೆರೆ ಹೋಬಳಿ ಗಂಗನಘಟ್ಟದ ಚಂದ್ರಶೇಖರ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದ, ಕೆ.ಸಿ.ಪಾಳ್ಯದ ಸೋಮಶೇಖರಯ್ಯ ಎಂಬುವರ ಮಗಳಾದ ಭವ್ಯ ಎಂಬಾಕೆ ಕಳೆದ ಇಪ್ಪತು ದಿನಗಳಿಂದ ಕಾಣೆಯಾಗಿದ್ದಾಳೆ. ಈಕೆ ತಂದೆ ಮನೆ ಕೆ.ಸಿ.ಪಾಳ್ಯಕ್ಕೆ ಬಂದಿದ್ದು, ಮೇ 31 ರಂದು ಸಮೀಪದ ಹುಳಿಯಾರಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆ ಬಿಟ್ಟು ಹೋಗಿದ್ದು ವಾಪಸು ಮನೆಗೆ ಹಿಂತಿರುಗಿರುವುದಿಲ್ಲ. ಭವ್ಯ ಸ್ವತಃ ತಾನೇ ಒಂದು ಚೀಟಿಯಲ್ಲಿ ತಾನು ಗಂಡನೊಂದಿಗೆ ಸಂಸಾರ ಮಾಡಲು ಹೋಗಲ್ಲ, ಬೇರೆ ಎಲ್ಲಾದರೂ ಜೀವನ ನಡೆಸುತ್ತನೆ, ನನ್ನನ್ನು ಹುಡುಕ ಬೇಡಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆಟ್ಟಿರುತ್ತಾಳೆ. ಈ ಸಂಬಂಧವಾಗಿ ಭವ್ಯಳ ಪತಿ ತನ್ನ ಮಡದಿಯನ್ನು ಪತ್ತೆಹಚ್ಚಿಕೊಡುವಂತೆ ಹುಳಿಯಾರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾಗಿರುವ ಭವ್ಯಗೆ ಸುಮಾರು 24 ವರ್ಷ, ಐದು ಅಡಿ ಎತ್ತರ, ಎಣ್ನೆ ಗೆಂಪು ಮೈಬಣ್ಣ ಹಾಗೂ ಕಾಣೆಯಾದಾಗ ಕಿತ್ತಳೆ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement