ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನಿಷ್ಠ ಕೂಲಿಯೂ ಇಲ್ಲದೆ ದುಡಿಮೆ

Rashmi Kasaragodu
Updated On : 25 Jun 2013, 12:04 pm

ಕ.ಪ್ರ.ವಾರ್ತೆ    ತುಮಕೂರು    ಜೂ. 24
ರಾಜ್ಯದಲ್ಲಿ 80 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ  ಬಿಸಿಯೂಟ ಮಾಡಿ ಬಡಿಸುತ್ತಿರುವ 1 ಲಕ್ಷ  ಬಿಸಿಯೂಟ ನೌಕರರ ಕನಿಷ್ಠ ಕೂಲಿಯು  ಇಲ್ಲದೆ ದುಡಿಯುತ್ತಿದ್ದಾರೆ . ಈ ನೌಕರರಿಗೆ  ಸರ್ಕಾರ ಕನಿಷ್ಠ ಕೂಲಿ ಜಾರಿಮಾಡದಿದ್ದರೆ  ಬಿಸಿಯೂಟದ ಅಡುಗೆ ಮನೆಗಳಿಗೆ ಬೀಗ  ಹಾಕಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ  ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷಿ  ಎಚ್ಚರಿಕೆ ನೀಡಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ತುಮಕೂರು ಜಿಲ್ಲಾ ಅಕ್ಷರ ದಾಸೋಹ ನೌಕರರ  ಸಂಘದ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷಗಳಿಂದ  ಕನಿಷ್ಠ ಕೂಲಿಯು ಇಲ್ಲದೆ ನೌಕರರು ದುಡಿಯುತ್ತಿದ್ದು  ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೇವಲ  ಒಂದು ಸಾವಿರ ಕೂಲಿಗೆ  ದುಡಿಯುತ್ತಿರುವ ನೌಕರರ ಬದುಕಿನ  ಬಗ್ಗೆ ಸರ್ಕಾರ ಗಮನಹರಿಸಬೇಕು  ಪ್ರತಿದಿನ ಏರುತ್ತಿರುವ ಬೆಲೆ ಏರಿಕೆಯಿಂದ  ತತ್ತರಿಸಿಹೊಗಿರುವ ನೌಕರರ ಬದುಕಿನ ಗತಿ ಏನು ಎಂದು ಪ್ರಶ್ನಿಸಿದ ಅವರು ಚುನಾವಣೆಗಳಲ್ಲಿ ನೌಕರರ ಸಮಸ್ಯೆಗಳನ್ನು ಸಹ ಆಲಿಸದ ಜನ ಪ್ರತಿನಿಧಿಗಳು ತಮ್ಮ ವೇತನಗಳನ್ನು ಒಂದು ಲಕ್ಷದವರೆಗೂ ಹೆಚ್ಚಿಸಿಕೊಂಡಿದ್ದು ಸರ್ಕಾರ ಯೋಜನೆಗಳು ಯಶಸ್ವಿಯಾಗಿ ನಡೆಯಲು ಕಾರಣಿಭೂತರಾಗಿರುವ ನೌಕರರ ಸಮಸ್ಯೆಗಳನ್ನು ಏಕೆ ಗಮನಹರಿಸುತ್ತಿಲ್ಲ ಎಂದರು.
ಸರ್ಕಾರಕ್ಕೆ ಎಚ್ಚರಿಕೆ: ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ಕೂಲಿ ಜಾರಿಮಾಡಬೇಕು. ನೌಕರರನ್ನು ಕೆಲಸದಲ್ಲಿ ಕಾಯಂ ಮಾಡಬೇಕು. ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಒಂದು ಲಕ್ಷದಷ್ಟಿರುವ ನೌಕರರು ಬಿಸಿಯೂಟದ ಅಡುಗೆ ಮನೆಗಳಿಗೆ  ಬೀಗ ಹಾಕಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್  ಮಾತನಾಡಿ, ದೇಶದಲ್ಲಿ 9.5 ಲಕ್ಷ ಶಾಲೆಗಳಲ್ಲಿ 20 ಕೋಟಿಗಿತಲೂ ಹೆಚ್ಚಿನ ಮಕ್ಕಳಿಗೆ ಪ್ರತಿದಿನ ಯಾವುದೇ ರೀತಿಯ ತೊಂದರೆಗಳೂ ಆಗದಂತೆ  ಸುಮಾರು 26 ಲಕ್ಷ ಬಿಸಿಯೂಟದ ನೌಕರರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡುವ ಒಂದುಸಾವಿರ ರು.ನಲ್ಲಿ ಅವರ ಮಕ್ಕಳ ಶಿಕ್ಷಣ, ಆರೋಗ್ಯ, ಮನೆಬಾಡಿಗೆ ಜೊತೆಗೆ ಸಂಸಾರವನ್ನು ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ  ಬಿ.ಪಿ.ಎಲ್ ಕಾರ್ಡುದಾರರಿಗೆ ಒಂದು ರು. ನಲ್ಲಿ 30 ಕೆ.ಜಿ ಅಕ್ಕಿ  ನೀಡುವ ಭರವಸೆ ನೀಡಿ 2 ತಿಂಗಳುಗಳು ಕಳೆದರೂ ಸಹ ಇನ್ನು ಸರ್ಕಾರದ ಭರವಸೆ ಈಡೇರಿಲ್ಲ ಮಾತ್ರವಲ್ಲದೆ ಎಪಿಎಲ್ ಕಾರ್ಡ್ದಾರರಿಗೆ ಅಕ್ಕಿಯನ್ನು ನೀಡಲು ಸಾಧ್ಯವಿಲ್ಲ ಎಂದಿರುವ ಸರ್ಕಾರದ ಕ್ರಮ ಸರಿಯಾದುದಲ್ಲ ಎಂದರು.
ನೌಕರರು ಅಡುಗೆ ಮಾಡುವ ಸಂದರ್ಭಗಳಲ್ಲಿ ಗಂಜಿಸುರಿದು ಗಾಯಗಳಾದ ಹಲವಾರು ಉದಾಹರಣೆಗಳು ಇವೆ. ಸರ್ಕಾರ ಈ ನೌಕರರನ್ನು ಕಾಯಂ ಮಾಡಬೇಕು ಎಂದರು.
ಸರಿಯಾದುದಲ್ಲ: ಸರ್ಕಾರ ಮಾಡಿಸಿಕೊಳ್ಳುವ ಕೆಲಸದಲ್ಲಿ 26 ದಿನಗಳ ಕೆಲಸವನ್ನು ಮಾತ್ರ ಪರಿಗಣಿಸುವ ಕ್ರಮ ಸರಿಯಾದುದಲ್ಲ ಎಂದ ಅವರು ಬಿಜೆಪಿ ಸರ್ಕಾರದ ನೀತಿಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಸರ್ಕಾರವನ್ನು ಜನತೆ ಅಧಿಕಾರಕ್ಕೆ ತಂದಿದ್ದಾರೆ. ಸಾಮಾಜಿಕ ನ್ಯಾಯದ ಮಾತನಾಡುವ ಸರ್ಕಾರ ಈ ನೌಕರರನ್ನು ಕಾಯಂ ಮಾಡಬೇಕು ಹಾಗೂ ನೌಕರರಿಗೆ ಕನಿಷ್ಠ 10 ಸಾವಿರ ರು.ಗಳನ್ನು ನೀಡಬೇಕು ಎಂದರು. ಸಿಐಟಿಯುನ ಜಿಲ್ಲಾ ಖಜಾಂಚಿ ಕಮಲ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ. ಮಲ್ಲಮ್ಮ, ಕೆಂಚಮ್ಮ ಅನುಸೂಯ, ಮುಂತಾದವರು ಉಪಸ್ಥಿತರಿದ್ದರು. ಸಮ್ಮೇಳನಕ್ಕೂ  ಮೊದಲು ನಗರದ ಟೌನ್ಹಾಲ್ ವೃತ್ತದಿಂದ  ಸಾವಿರಾರು ನೌಕರರು ಬೃಹತ್ ರ್ಯಾಲಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement