ನನ್ನ ವಿರುದ್ಧ ಕಿಡಿಗೇಡಿಗಳು ಹಬ್ಬಿಸಿದ ಕುಚೇಷ್ಟೆಗೆ ಕಿವಿಗೊಡಬೇಡಿ
ಕ.ಪ್ರ.ವಾರ್ತೆ ಪಾವಗಡ ಜೂ. 24
ಪಕ್ಷ ನಿಷ್ಠೆಗೆ ಹೆಸರಾಗಿರುವ ನನ್ನ ವಿರುದ್ಧ ಹಬ್ಬಿಸಿದ ಕುಚೇಷ್ಟೆಗೆ ಕಿವಿಗೊಡಬೇಡಿದ್ದ ನನ್ನ ವಿರುದ್ಧ ಕೆಲ ಕಿಡಿಗೇಡಿಗಳು ಪಕ್ಷಾಂತರ ವಿಚಾರವಾಗಿ ಹಬ್ಬಿಸಿದ ಕುಚೇಷ್ಟೆಗೆ ಕಿವಿಗೊಡಬೇಡಿ. ಪಕ್ಷಕ್ಕೆ ದ್ರೋಹ ಮಾಡುವ ವ್ಯಕ್ತಿ ನನ್ನಲ್ಲ ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ವತಿಯಿಂದ ಸೋಮವಾರ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಅಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡುತ್ತಿದ್ದರು.
ಸರಳ ಪ್ರಮಾಣಿಕತೆ ಹಾಗೂ ನನ್ನ ಪಕ್ಷ ನಿಷ್ಠೆ ಸಹಿಸದ ಕೆಲ ವಿರೋಧ ಪಕ್ಷದವರು ನನ್ನ ವಿರುದ್ಧ ಷಡ್ಯಂತರ ರೂಪಿಸಿ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂಬ ವದಂತಿ ಹಬ್ಬಸಿ ಕಾರ್ಯಕರ್ತರಿಗೆ ಗೊಂದಲ ಸೃಷ್ಟಿಸಿದ್ದಾರೆ. ಅವರ ಕಿಡಿಗೇಡಿ ಮಾತುಗಳಿಗೆ ಕಿವಿಗೊಡದೇ ಉತ್ತಮ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ವಂಚಿಸುವವನಲ್ಲ: ನನ್ನನ್ನು ನಂಬಿ ಮತದಾರರು ಪಕ್ಷದ ಪರ ಅತ್ಯಧಿಕ ಮತ ನೀಡಿ ವಿಧಾನ ಸಭೆಗೆ ಆಯ್ಕೆ ಮಾಡಿದ್ದಾರೆ. ನಂಬಿದ ಮತದಾರರು ಮತ್ತು ಕಾರ್ಯಕರ್ತರಿಗೆ ವಂಚಿಸುವ ವ್ಯಕ್ತಿ ನಾನಲ್ಲ, ಬಡತನದಲ್ಲಿದ್ದರು ಸ್ವಾಭಿಮಾನಿ, ಹೋರಾಟದ ಹಿನ್ನೆಲೆಯಲ್ಲಿ ಬಂದ ನಾನು ಪಕ್ಷಕ್ಕೆ ಬದ್ಧ, ನನ್ನ ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳಿ. ಅಪಪ್ರಚಾರ ಮಾಡಬೇಡಿ ಎಂದರು.
ಧರ್ಮಯುದ್ಧ: ಹಣ ಮತ್ತು ಇತರೆ ಆಮಿಷಗಳಿಗೆ ಬಲಿಯಾಗದೇ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ಧರ್ಮಯುದ್ಧದಲ್ಲಿ ತಾ.ಮುಖಂಡರು, ಕಾರ್ಯಕರ್ತರು ಒಮ್ಮತದಿಂದ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದ ಪರ ಮತ ನೀಡಿ ಗೆಲ್ಲಿಸಿದ್ದಿರಿ, ನಿಮ್ಮ ಅಭಿಮಾನಕ್ಕೆ ಋಣಿಯಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗುವುದಾಗಿತಿಳಿಸಿದರು.
ಕುಡಿಯುವ ನೀರು ಯೋಜನೆ ಅನುಷ್ಠಾನ ಸೇರಿದಂತೆ ಕಾರ್ಯಕರ್ತರ ಬೆಂಬಲದೊಂದಿಗೆ ತಾ.ಸಮಗ್ರ ಅಭಿವೃದ್ಧಿಗೆ ಅವಿರತ ಹೋರಾಟ ಮಾಡುವ ಭರವಸೆ ನೀಡಿದರು. ಶುದ್ಧ ಕಡಿಯುವ ನೀರಿನ ಘಟಕಗಳ ನಿರ್ಮಾಣ, ರಿಯಾಯಿತಿ ದರದ ಶೇಂಗಾ ವಿತರಣೆ ಸೇರಿದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಯುತ್ತಿದ್ದು ಸರ್ಕಾರ ಮಟ್ಟದಲ್ಲಿ
ತಾ. ಅಭಿವೃದ್ಧಿಗೆ ಸಹಕಾರ ನೀಡುವುದಿಲ್ಲ ಎಂಬ ಅಪಪ್ರಚಾರಕ್ಕೆ ಕಿವಿಗೊಡದೇ ಅಧಿಕಾರಿಗಳಲ್ಲಿ ಸಂಪರ್ಕವಿಟ್ಟು ಉತ್ಸಾಹದಿಂದ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.