ಹುಳಿಯಾರು: ವ್ಯಕ್ತಿ ಆತ್ಮಹತ್ಯೆ
ಹುಳಿಯಾರು: ಗುಣಮುಖವಾದ ಕಾಯಿಲೆಗೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೋಬಳಿಯ ಕೆ.ಸಿ.ಪಾಳ್ಯದಲ್ಲಿ ಸೋಮವಾರ ನಡೆದಿದೆ. 45 ವರ್ಷ ವಯಸ್ಸಿನ ರಮೇಶ್ ಎಂಬಾತ ಹಲವು ದಿನಗಳಿಂದ ಕಾಯಿಲೆಯಿಂದ ನೊಂದಿದ್ದ, ಈತ ತನ್ನ ಜಮೀನಿನಲ್ಲಿದ್ದ ಮುತುಗದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಹೆಂಡತಿ, ಒಬ್ಬ ಮಗ, ಮಗಳು ಇದ್ದಾರೆ. ಎ.ಎಸ್.ಐ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.