ಇಂದು 106ನೇ ವಾರ್ಷಿಕೋತ್ಸವ
ತಿಪಟೂರು: ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಶ್ರೀಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ 106ನೇ ವರ್ಷದ ವಾರ್ಷಿಕೋತ್ಸವ ಮತ್ತು ಶ್ರೀಗಿರಿಜಾ ಕಲ್ಯಾಣ ಮಹೋತ್ಸವವು ಇಂದು ಮತ್ತು ಜು.1ರಂದು ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಶ್ರೀಗುರುದೇವತಾ ಪ್ರಾರ್ಥನೆ, ನಾಂದಿ ಪೂಜೆ, ಸುಬ್ರಹ್ಮಣ್ಯ ಹೋಮ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀರುದ್ರಹೋಮ, ಶ್ರೀಮಲ್ಲಿಕಾರ್ಜುನಸ್ವಾಮಿ ಅವರಿಗೆ ವರಪೂಜೆ ನಡೆಯಲಿದೆ. ಜು.1ರಂದು ರುದ್ರಾಭಿಷೇಕ, ಗಿರಿಜಾ ಕಲ್ಯಾಣ ಮಹೋತ್ಸವ, ಉಚಿತ ಸಾಮೂಹಿಕ ವಿವಾಹ ಮಹಾಮಂಗಳಾರತಿ ಹಾಗೂ ಶ್ರೀಶಯನೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಭಕ್ತರು ಭಾಗವಹಿಸಿ ಶ್ರೀಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ತಿಳಿಸಿದೆ.