ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭ
ತಿಪಟೂರು: ನಗರದ ಶ್ರೀವೀರಶೈವ ಗುರುಕುಲಾನಂದಾಶ್ರಮ ಸಿಡ್ಲೇಹಳ್ಳಿ ಮಹಾಸಂಸ್ಥಾನ ಶ್ರೀಮಠದ ಎಸ್ಬಿಎಸ್ ಶ್ರೀಮಠದ ವಿದ್ಯಾಸಂಸ್ಥೆ ವತಿಯಿಂದ ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಕರಡಾಳು ಗ್ರಾಮದಲ್ಲಿ ಮಂಜುನಾಥ ಗ್ರಾಮಾಂತರ ಪ್ರೌಢಶಾಲಾ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭವು ಜು.1ರ ಸೋಮವಾರ ಬೆಳಿಗ್ಗೆ 9.15ಕ್ಕೆ ಏರ್ಪಡಿಸಲಾಗಿದೆ. ಸಾನ್ನಿಧ್ಯವನ್ನು ಗುರುಕುಲಾನಂದಾಶ್ರಮದ ಶ್ರೀಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆ ಸಂಸದ ಜಿ.ಎಸ್. ಬಸವರಾಜು ವಹಿಸಲಿದ್ದಾರೆ. ತರಗತಿ ಕೊಠಡಿ ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ, ಕಂಪ್ಯೂಟರ್ ಕೊಠಡಿ ಉದ್ಘಾಟನೆಯನ್ನು ಮಾಜಿ ಶಾಸಕ ಬಿ.ಸಿ.ನಾಗೇಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಗುರುಕುಲ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ನಿ.ಜಂಟಿ ಕಾರ್ಯದರ್ಶಿ ಸಿ. ಬಸವರಾಜು, ಉಪವಿಭಾಗಾಧಿಕಾರಿ ಶಿಲ್ಪಾ, ತಹಸೀಲ್ದಾರ್ ಬಿ.ಆರ್. ಮಂಜುನಾಥ್, ಬಿಇಓ ಮನಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ.